ಪಂಚಮಸಾಲಿ ವಿರಾಟ ಪಂಚ ಶಕ್ತಿ ಮಹಾಸಮಾವೇಶಕ್ಕೂ ಮುನ್ನ ಮುಖಂಡರಿಂದ ಸಭೆ

ಪಂಚಮಸಾಲಿ ವಿರಾಟ ಪಂಚ ಶಕ್ತಿ ಮಹಾಸಮಾವೇಶ ಹಿನ್ನಲೆ ಸಮಾವೇಶ ಅರಂಭಕ್ಕೂ ಮುನ್ನ ಹಿರೇಬಾಗೇವಾಡಿಯಿಂದ ಸುವರ್ಣಸೌಧದವರೆಗೂ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆ ಆರಂಭಕ್ಕೂ ಮುನ್ನ ಪಂಚಮಸಾಲಿ ಮುಖಂಡರು ಹಿರೇಬಾಗೇವಾಡಿಯ ಅಡಿವೇಶ ಇಟಗಿಯವರ ಮನೆಯಲ್ಲಿ ಸಭೆ ನಡೆಸಿದ್ದು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅರವಿಂದ ಬೆಲ್ಲದ್, ವೀಣಾ ಕಾಶಪ್ಪನವರ್, ಎಚ್ ಎಸ್ ಶಿವಶಂಕರ್ ಅವರು ಭಾಗಿಯಾದರು.