ಮೋದಿ ವಿರುದ್ಧ ಟೀಕೆ: 15ರ ಒಳಗೆ ಉತ್ತರಿಸುವಂತೆ ರಾಹುಲ್‌ಗೆ ಲೋಕಸಭೆ ಸೂಚನೆ

ಮೋದಿ ವಿರುದ್ಧ ಟೀಕೆ: 15ರ ಒಳಗೆ ಉತ್ತರಿಸುವಂತೆ ರಾಹುಲ್‌ಗೆ ಲೋಕಸಭೆ ಸೂಚನೆ

ವದೆಹಲಿ: ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಇದೇ 15ರ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಲೋಕಸಭೆ ಸಚಿವಾಲಯ ರಾಹುಲ್‌ಗೆ ಸೂಚಿಸಿದೆ.

10ರಂದು ರಾಹುಲ್‌ಗೆ ಪತ್ರ ಬರೆದಿರುವ ಕಾರ್ಯದರ್ಶಿ, ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಇದೇ 15 ರೊಳಗೆ ವಿಶೇಷ ಹಕ್ಕುಗಳ ಉಲ್ಲಂಘನೆಯ ನೋಟಿಸ್‌ಗೆ ಉತ್ತರವನ್ನು ಲೋಕಸಭೆಗೆ ನೀಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಮಂಗಳವಾರ ಲೋಕಸಭೆಯಲ್ಲಿ 'ರಾಷ್ಟ್ರಪತಿಗಳ ಭಾಷಣದ ಧನ್ಯವಾದ ನಿರ್ಣಯ'ದ ನಂತರ ಭಾಷಣ ಮಾಡಿದ ರಾಹುಲ್‌ ಗಾಂಧಿ ಅವರು, ಹಿಂಡೆನ್‌ಬರ್ಗ್-ಅದಾನಿ ವಿಷಯದ ಕುರಿತು ಪ್ರತಿಕ್ರಿಯಿಸಿ ಟೀಕಿಸಿದ್ದರು. ಇದಕ್ಕೆ ಬಿಜೆಪಿಯ ದುಬೆ ಮತ್ತು ಜೋಶಿ, ರಾಹುಲ್‌ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್‌ ಸಲ್ಲಿಸಿದ್ದು, ನೋಟಿಸ್‌ನಲ್ಲಿ ರಾಹುಲ್‌ ಅವರ ಹೇಳಿಕೆಗಳು ಆಧಾರರಹಿತವಾಗಿವೆ ಹಾಗೂ ಅಸಂಸದೀಯ ಮತ್ತು ಅವಮಾನಕರ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದರು.