ಎಬಿ ಡಿ ಅಂತರಾಷ್ಟ್ರೀಯ ನಿವೃತ್ತಿಯಿಂದ ಹಿಂದೆ ಸರಿಯಲ್ಲ: ಸಿಎಸ್‌ಎ ಸ್ಪಷ್ಟನೆ
ಎಬಿ ಡಿ ಅಂತರಾಷ್ಟ್ರೀಯ ನಿವೃತ್ತಿಯಿಂದ ಹಿಂದೆ ಸರಿಯಲ್ಲ: ಸಿಎಸ್‌ಎ ಸ್ಪಷ್ಟನೆ
ಜೊಹಾನ್ಸ್ ಬರ್ಗ್:ಭಾರತದಲ್ಲಿ ನಡೆಯಲಿರುವ ಮುಂದಿನ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ಎಬಿ ಡಿ ವಿಲಿಯರ್ಸ್ ಅಂತರರಾಷ್ಟ್ರೀಯ ನಿವೃತ್ತಿಯನ್ನು ಹಿಂಪಡೆಯುವುದಿಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಂಗಳವಾರ ಪ್ರಕಟಿಸಿದೆ, ಅವರು ತಮ್ಮ ಮನಸ್ಸನ್ನು ಬದಲಾಯಿಸದಿರಲು ನಿರ್ಧರಿಸಿದ್ದಾರೆ ಎಂದು ಅದು ಹೇಳಿದೆ. ಇದರಿಂದಾಗಿ ಸ್ಫೋಟಕ ಬ್ಯಾಟ್ಸ್ ಮನ್ ಡಿ ವಿಲಿಯರ್ಸ್ ಮತ್ತೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಅಭಿಮಾನಿಗಳ ಕನಸು ನುಚ್ಚು ನೂರಾಗಿದೆ.
"ಚರ್ಚೆ ಮುಗಿದಿದೆ, ಎಬಿ ಡಿ ನಿವೃತ್ತಿ ಹಾಗೆಯೇ ಇರಲಿದೆ." ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿದೆ. ಈ ಮೂಲಕ ಅವರ ಪುನರಾಗಮನದ ಬಗೆಗಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. "ಸಿಎಸ್‌ಎ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತಂಡವನ್ನು ಘೋಷಿಸಿದ ನಂತರ ಈ ಹೇಳಿಕೆ ಬಂದಿದೆ., ಮೇ 2018 ರಲ್ಲಿ ಡಿ ವಿಲಿಯರ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.
ಅಚ್ಚರಿಯ ನಿರ್ಧಾರವನ್ನು ಪ್ರಕಟಿಸುವ ಮೊದಲು ಅವರು 114 ಟೆಸ್ಟ್, 228 ಏಕದಿನ ಮತ್ತು 78 ಅಂತರಾಷ್ಟ್ರೀಯ ಟಿ 20 ಗಳನ್ನು ಆಡಿದ್ದಾರೆ.
ಆದರೆ, ಕಳೆದ ತಿಂಗಳು 37 ವರ್ಷದಕ್ರಿಕೆಟಿಗ ಟಿ 20 ವಿಶ್ವಕಪ್‌ಗೆ ಮುನ್ನ ಅಂತರರಾಷ್ಟ್ರೀಯ ಪುನರಾಗಮನ ಮಾಡುವುದು ಒಂದು ಅದ್ಭುತ ಎಂದು ಹೇಳಿದ್ದರು. ಟಿ -20 ವಿಶ್ವಕಪ್ ಅಕ್ಟೋಬರ್-ನವೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿದೆ.
ದಕ್ಷಿಣ ಆಫ್ರಿಕಾದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಡಿ ವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇದುವರೆಗೂ ಉತ್ತಮ ಫಾರ್ಮ್ ನಲ್ಲಿದ್ದರು/ ಮೂರು ವರ್ಷಗಳ ಹಿಂದೆ ಹಠಾತ್ ನಿವೃತ್ತಿಯ ನಂತರ ಡಿ ವಿಲಿಯರ್ಸ್ ಪುನರಾಗಮನದ ಕುರಿತು ಚರ್ಚೆಗಳು ನಿರಂತರವಾಗಿ ನಡೆದಿತ್ತು., ಇದರಲ್ಲಿ 2019 ರ ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾದ ತಂಡದಲ್ಲಿ ಕೊನೆಯ ನಿಮಿಷದಲ್ಲಿ ಸೇರ್ಪಡೆಗೊಳ್ಳುತ್ತಾರೀ ಎಂದು ಭಾವಿಸಿದ್ದೂ ಸಹ ಸೇರಿದೆ.