ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ವಿಧಿವಶ

ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ವಿಧಿವಶ

ಬೆಂಗಳೂರು: ಹಿರಿಯ ಪತ್ರಕರ್ತರು ಮತ್ತು ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕರಾದ ಕೆ. ಸತ್ಯನಾರಾಯಣ ಅವರು ಇಂದು ನಿಧನರಾಗಿರೋದಾಗಿ ತಿಳಿದು ಬಂದಿದೆ.

ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳುತ್ತಿದ್ದಂತ ಅವರು, ಇಂದು ತಮ್ಮ ಜಯನಗರದ ಎಲ್ ಐಸಿ ಕಾಲೋನಿ ನಿವಾಸದಲ್ಲಿ ನಿಧನರಾಗಿದ್ದಾರೆ.

ಅಂದಹಾಗೇ, ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರು, ಕನ್ನಡ‌ಪ್ರಭ ಕಚೇರಿಯಿಂದ ಬಗಲ ಚೀಲ ನೇತಾಡಿಸಿಕೊಂಡು ನಡೆದುಕೊಂಡೇ ತೆರಳುತ್ತಿದ್ದರಂತೆ. ಎರಡು ಹೋಳು ಬ್ರೆಡ್ ಒಂದು ಕಾಫಿ ಅವರ ಸಂಜೆಯ ಆಹಾರವಾಗಿತ್ತಂತೆ.

ಅ ಚ , ಸಾ ಚ , ಸಂಕ್ಲಾಪುರ, ಹೀರೇಮಠ ಮುಂತಾದ ವಿಧಾನ ಸೌಧ ರೌಂಡ್ ಹೊಡೆಯುವವರನ್ನು ಹುಡುಕಿ ಬಂದು ಮಾತಾಡಿಸಿ ವಿಷಯ ಸಂಗ್ರಹಣೆ ಮಾಡುತ್ತಿದ್ದರಂತೆ. ಗುರುವಾರದ ಅವರ ಕಾಲಂ ಓದಿದ ನಂತರವೇ ದೇವೇಗೌಡರು ಸೇರಿದಂತೆ ಹಲವರ ದಿನಚರಿ ಆರಂಭವಾಗುತ್ತಿತ್ತಂತೆ.

ಹಲವಾರು ಪತ್ರಕರ್ತ ಸತ್ಯ ಗಳಿದ್ದರಿಂದ ಇವರನ್ನು ಕನ್ನಡಪ್ರಭ ಸತ್ಯ, ಕುಳ್ಳ ಸತ್ಯ ಎಂದು ಕರೆಯುತ್ತಿದರು ಎಂಬುದಾಗಿ ತಿಳಿದು ಬಂದಿದೆ. ಇಂತಹ ಕೆ.ಸತ್ಯನಾರಾಯಣ ಅವರು ಇಂದು ನಿಧನರಾಗುವ ಮೂಲಕ, ಇನ್ನಿಲ್ಲವಾಗಿದ್ದಾರೆ.