ಕುರುಬರ ಸಂಘ ಉಳಿಸಿದ್ದು ನಾನು: ಸಿದ್ದರಾಮಯ್ಯ

ಬೆಂಗಳೂರು: 'ನಾನು ಇಲ್ಲದಿದ್ದರೆ ಕುರುಬರ ಸಂಘ ಉಳಿಯುತ್ತಿರಲಿಲ್ಲ. ಯಾರೋ ಮಾರಿಕೊಂಡು ತಿಂದುಬಿಡುತ್ತಿದ್ದರು. ಈ ವಿಚಾರದಲ್ಲಿ ನನಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು' ಎಂದು ಸಿದ್ದರಾಮಯ್ಯ ಹೇಳಿದರು.
ನಗರದ ಡಿ.ದೇವರಾಜ ಅರಸು ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
'ಕನಕ ಗುರುಪೀಠ ಮಾಡಿದ್ದು ನಾನು. ಗುರುಪೀಠ ರಚನೆ ಕುರಿತ ಮೊದಲ ಸಭೆಗೆ ಈಶ್ವರಪ್ಪ ಬಂದಿದ್ದ. ಪೀಠ ಸ್ಥಾಪನೆಗೆ ಹಣ ಕೇಳಿದರು. ಎರಡನೇ ಸಭೆಗೆ ಆ ಗಿರಾಕಿ ಬರಲೇ ಇಲ್ಲ. ಆದರೂ, ಅವ ನಮ್ಮವ ಅಂತ ಜೈಕಾರ ಹಾಕುತ್ತೀರಿ' ಎಂದು ಹೇಳಿದರು.