ಗುಂಡ್ಲುಪೇಟೆ: ಅಭಿಮಾನಿಯ ಕುಟುಂಬಕ್ಕೆ ಯಡಿಯೂರಪ್ಪ ಸಾಂತ್ವನ, ₹5 ಲಕ್ಷ ಪರಿಹಾರ
ಗುಂಡ್ಲುಪೇಟೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾಲ್ಲೂಕಿನ ಬೊಮ್ಮಲಾಪುರ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ, ತಮ್ಮ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ರವಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ರವಿ ಅವರ ತಾಯಿ ರೇವಮ್ಮ ಹಾಗೂ ಇತರ ಸದಸ್ಯರಿಗೆ ಧೈರ್ಯ ತುಂಬಿದ ಅವರು, ₹5 ಲಕ್ಷ ರೂಪಾಯಿ ಪರಿಹಾರವನ್ನೂ ನೀಡಿದರು.
ಮನೆ ದುರಸ್ತಿಗೆ ಇನ್ನೂ ₹5 ಲಕ್ಷ ನೀಡುವ ಭರವಸೆಯನ್ನೂ ಕೊಟ್ಟರು.
ಮಗ ವಿಜಯೇಂದ್ರ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಎನ್.ಮಹೇಶ್ ಅವರು ಜೊತೆಗಿದ್ದರು.