ಅಗ್ನಿಶಾಮಕ ದಳ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಉಸಿರು ಚೆಲ್ಲಬೇಕಿದ್ದ ಜಾನುವಾರುವೊಂದು ಸಾವಿನ ದವಡೆಯಿಂದ ಪಾರು
ಮೇವನ್ನರಸಿ ಬಂದು ಗುಂಡಿಯೊಂದರೊಳಗೆ ಬಿದ್ದಿದ್ದ ಜಾನುವಾರೊಂದು ಅಗ್ನಿ ಶ್ಯಾಮಕದಳ ಸಿಬ್ಬಂಧಿಯ ಸಮಯ ಪ್ತಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಖಾಅಗಿ ಬಸ್ನಿಲ್ದಾಣ ಬಳಿಯಲ್ಲಿ ತೋಡಲಾಗಿದ್ದ ಗುಂಡಿಯೊಳಗೆ ಸಿಲುಕಿ ಒದ್ದಾಡುತ್ತಿದ್ದ ಜಾನುವಾರುವನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಕಚೇರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಹನುಮಂತು ,ಶಿವಕುಮಾರ್, ಇನ್ನಿತರ ಸಿಬ್ಬಂದಿಗಳು ಬೆಂಕಿ ಆರಿಸಲು ಉಪಯೋಗಿಸುವ ಪೈಪ್ ಮೂಲಕ ಮೂಕಪ್ರಾಣಿಗೆ ಮರುಜೀವ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ಸಾಥ್ ನೀಡಿದ ಸಾರ್ವಜನಿಕರು ಇವರ ನಿಸ್ವಾರ್ಥ ಸೇವೆಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಹಲವೆಡೆ ಈ ರೀತಿಯಾಗಿ ಬಲಿಗಾಗಿ ಅನೇಕ ಗುಂಡಿಗಳು ಬಾಯ್ತೆರೆದು ನಿಂತಿವೆ. ಇವುಗಳಲ್ಲಿ ಸಹ ಅನಾಹುತ ಮರುಕಳಿಸುವ ಮುಂಚೆಯೇ ಪುರಸಭೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ