ನಮ್ಮನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಿ; ಆಶಾಕಾರ್ಯಕರ್ತೆಯರ ಮನವಿ

ಗುಂಡ್ಲುಪೇಟೆಯ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಆಶಾ ಕಾರ್ಯಕರ್ತೆಯರ ತಾಲೂಕು ಅಧ್ಯಕ್ಷೆ ಮಂಜುಳಮ್ಮ ಮಾತನಾಡಿ, ಕರೋನಾ ಸಂಧರ್ಭದಲ್ಲಿ ಆಶಾ ಕಾರ್ಯಕರ್ತೆಯರು ವಾರಿಯರ್ಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸರ್ಕಾರದಿಂದ ಬರುವ ವೇತನದಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ನಮ್ಮ ಕೆಲಸವನ್ನು ಪರಿಗಣಿಸಿ ಸರ್ಕಾರವು 20 ಸಾವಿರ ಪೆÇ್ರೀತ್ಸಾಹ ಧನವನ್ನು ನಿಗದಿಪಡಿಸಿ ನಮ್ಮನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು ಸರ್ಕಾರದಿಂದ ಬರುವ ಅಲ್ಪ ಮೊತ್ತದ ಸಹಾಯಧನದಿಂದ ನಮ್ಮ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಆಶಾ ಕಾರ್ಯಕರ್ತೆ ಲಕ್ಸ್ಮಿ ತಮ್ಮ ಅಳಲನ್ನು ತೋಡಿಕೊಂಡರು.