ಎರಡಲ್ಲಾ.. ಮೂರನೇ ಮದುವೆಗೂ ಜೈ ಎಂದ ಭೂಪ
ಚಾಮರಾಜನಗರ: ಮೊದಲೇ ಎರಡು ಮದುವೆಯಾಗಿದ್ದ ವ್ಯಕ್ತಿಯೊಬ್ಬ ಇದೀಗ ಲಾಕ್ಡೌನ್ನಲ್ಲಿ ಮೂರನೇ ಮದುವೆಯಾಗಿದ್ದಾರೆ ಎಂದು ಮೊದನೇ ಪತ್ನಿ ದೂರು ನೀಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಮೈಸೂರಿನ ಜಿಲ್ಲೆ ಟಿ.ನರಸೀಪುರ ತಾಲೂಕು ಅಕ್ಕೂರು ಗ್ರಾಮದ ನಿವಾಸಿ ರಾಜೇಶ್ (35) ವಿರುದ್ಧ ದೂರು ದಾಖಲಾಗಿದೆ.
ರಾಜೇಶ್ 7 ವರ್ಷದ ಅಂತರದಲ್ಲಿ ಮೂರು ಮದುವೆಯಾಗಿದ್ದು, ಟಿ. ನರಸೀಪುರದ ವಾಟಾಳು ಗ್ರಾಮದ ಯುವತಿಯನ್ನು ಮೊದಲ ಮದುವೆಯಾಗಿದ್ದಾನೆ. ಬಳಿಕ ಬೆಂಗಳೂರು ಬಳಿಯ ಹುಲಿದುರ್ಗದ ಮಹಿಳೆ ಜೊತೆ ಎರಡನೇ ಮದುವೆಯಾಗಿದ್ದು, ಇಬ್ಬರನ್ನೂ ಬಿಟ್ಟು ಲಾಕ್ಡೌನ್ ವೇಳೆ ಮೂರನೇ ಮದುವೆಯಾಗಿದ್ದಾನೆ ಎನ್ನಲಾಗಿದೆ.
ಗಂಡ ಬುದ್ದಿ ತಿಳಿದ ಎರಡನೇ ಪತ್ನಿ ಆತನಿಂದ ದೂರಯಿದ್ದು, ಮೊದಲನೇ ಪತ್ನಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಸದ್ಯ ಮೂರು ಮದುವೆಯಾಗಿರುವ ರಾಜೇಶ್ ವಿರುದ್ಧ ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.