ಸಾರಿಗೆ ಇಲಾಖೆ; ಹೆಚ್ಚುವರಿ ಆಯುಕ್ತರ ಹುದ್ದೆಗೂ ನಿಯೋಜನೆ

ಸಾರಿಗೆ ಇಲಾಖೆ; ಹೆಚ್ಚುವರಿ ಆಯುಕ್ತರ ಹುದ್ದೆಗೂ ನಿಯೋಜನೆ

ಬೆಂಗಳೂರು: ವರ್ಗಾವಣೆ ನಿಯಮಗಳಿಗೆ ವಿರುದ್ದವಾಗಿ ಕಾರ್ಯನಿರ್ವಹಣಾ ವ್ಯವಸ್ಥೆ ಹೆಸರಲ್ಲಿ ಸಿಬ್ಬಂದಿಯನ್ನಷ್ಟೇ ಅಲ್ಲ, ಹೆಚ್ಚುವರಿ ಆಯುಕ್ತರುಗಳನ್ನೂ ಸಾರಿಗೆ ಇಲಾಖೆ ನಿಯೋಜನೆ ಮಾಡಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಹೆಚ್ಚುವರಿ ಆಯುಕ್ತ ಜಿ.ಜ್ಞಾನೇಂದ್ರ ಕುಮಾರ್‌‌ ಅವರನ್ನು ಇ-ಆಡಳಿತ & ಪರಿಸರ ವಿಭಾಗಕ್ಕೆ ಅಲ್ಲಿದ್ದ ಜಿ.ಪುರುಷೋತ್ತಮ ಅವರನ್ನು ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ಪರಸ್ಪರ ನಿಯೋಜನೆ ಮಾಡಲಾಗಿದೆ.