ಜೆಡಿಎಸ್ ನಿಂದ ಕುಟುಂಬ ರಾಜಕಾರಣ : ಅಮಿತ್ ಶಾ ಹೇಳಿಕೆಗೆ ಮಾಜಿ ಸಿಎಂ `HDK' ತಿರುಗೇಟು
ಹುಬ್ಬಳ್ಳಿ : ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಮ್ಮ ಪಕ್ಷದಲ್ಲಿ ಮಾತ್ರನಾ ಕುಟುಂಬ ರಾಜಕಾರಣ ಇದೆಯಾ?ಬೇರೆ ಪಕ್ಷದಲ್ಲಿ ಇಲ್ಲವಾ?
ನಮ್ಮ ಕುಟುಂಬದಲ್ಲಿ ನಾವು ಹಿಂಬಾಗಿಲಿನಿಂದ ರಾಜಕಾರಣಕ್ಕೆ ಬಂದಿಲ್ಲ. ನಮ್ಮ ಹೋರಾಟದ ಮೂಲಕ, ಜನರ ಅಪೇಕ್ಷೆಯಂತೆ ರಾಜಕಾರಣಕ್ಕೆ ಬಂದಿದ್ದೇವೆ. ಬಿಜೆಪಿ ಪಕ್ಷದಲ್ಲೇ ಕುಟುಂಬ ರಾಜಕಾರಣ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.