ಮುಂದಿನ ವರ್ಷ ಷೇರುಪೇಟೆಗೆ ಟಾಟಾದಿಂದ ಮತ್ತೊಂದು IPO

2023ರಲ್ಲಿ ಮತ್ತೊಂದು ಹೊಸ ಐಪಿಒ ಬಿಡುಗಡೆ ಮಾಡಲು ಟಾಟಾ ಗ್ರೂಪ್ ಸಿದ್ಧತೆ ನಡೆಸಿದೆ. 2025ರ ವೇಳೆಗೆ ಭಾರತದ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆ 300 ಬಿಲಿಯನ್ ಡಾಲರ್ ಮೌಲ್ಯ ತಲುಪುವ ಸಾಧ್ಯತೆ ಇದೆ. ಇದರ ಲಾಭ ಪಡೆಯಲು ಮುಂದಾಗಿರುವ ಟಾಟಾ ಗ್ರೂಪ್ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿ. (TEPL) ಎಂಬ ಅಂಗಸಂಸ್ಥೆ ಸ್ಥಾಪಿಸಿ, ಇದರ ಐಪಿಒ ಬಿಡುಗಡೆ ಮಾಡಲಿದೆ. ಟಾಟಾ ಇಲೆಕ್ಟ್ರಾನಿಕ್ಸ್ ಎಂಬ ಅಂಗಸಂಸ್ಥೆ 2020ರಲ್ಲಿ ತಮಿಳುನಾಡೆಇನ ಕೃಷ್ಣಗಿರಿ ಪ್ರದೇಶದಲ್ಲಿ ಆರಂಭ ಮಾಡಲಾಗಿದೆ.