ಜಾತ್ರೆಯಲ್ಲಿ ಎಲ್ಲಾ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ; ಶಾಸಕ ಉದಯ್ ಗರುಡಾಚಾರ್

ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀನಿ. ಶಾಸಕ ಸ್ಥಾನದಲ್ಲಿ ಕುಳಿತ ಮೇಲೆ ನನಗೆ ಜಾತಿ, ಧರ್ಮದ ಬೇಧಭಾವ ಇಲ್ಲ. ಎಲ್ಲಾ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆ ವಿಷಯ ನನ್ನ ಗಮನಕ್ಕೆ ಬಂದಿಲ್ಲ
ನಾನು ಮನೆಯಲ್ಲಿ ಬ್ರಾಹ್ಮಣ, ಆಚೆ ಬಂದರೆ ನಾನು ವಿಶ್ವ ಮಾನವ. ದರ್ಗಾ, ಮಸೀದಿಗಳ ಮುಂದೆ ಹಿಂದೂಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರುವ ವಿಷಯ ನನ್ನ ಗಮನಕ್ಕೆ ತಂದಿಲ್ಲ ಎಂದರು.
ಉದ್ದೇಶಪೂರ್ವಕವಾಗಿ ಮಾಡ್ತಿರೋ ತರಲೆ
ಕೆಲ ಹಿಂದೂ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ತರಲೆ ಮಾಡುತ್ತಿದ್ದಾರೆ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸೈಲೆಂಟ್ ಸುನೀಲ್ ಹಿನ್ನೆಲೆ ಗೊತ್ತಿಲ್ಲ
ಇದೇ ವೇಳೆ ಸೈಲೆಂಟ್ ಸುನೀಲ್ ಆಯೋಜನೆಯ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ವಿಚಾರಕ್ಕೆ ಸ್ಪಷ್ಟನೆ ನೀಡಿದರು. ನಾನು ಹೋದಾಗ ಅವರು ಯಾರು ಇರಲಿಲ್ಲ. ಅದು ಒಳ್ಳೆಯ ಕಾರ್ಯಕ್ರಮ ರಕ್ತದಾನ ಶಿಬಿರ ಆಗಿದ್ದರಿಂದ ಅಲ್ಲಿಗೆ ಹೋಗಿದ್ದೆ. ಅದು ಸುನೀಲನ ಕಾರ್ಯಕ್ರಮ ಅಂತ ಹೋಗಿರಲಿಲ್ಲ ಎಂದು ಭಾಗಿಯಾಗುವಿಕೆ ಬಗ್ಗೆ ಸ್ಪಷ್ಟನೆ ನೀಡಿದರು.ನನಗೆ ಸುನೀಲ ಗೊತ್ತು, ಆದ್ರೆ ಅವರು ಸೈಲೆಂಟ್ ಸುನೀಲ ಅಂತ ಗೊತ್ತಿಲ್ಲ. ಅವರು ಸೈಲೆಂಟ್ ಸುನೀಲ, ರೌಡಿ ಶೀಟರ್ ಎಂಬ ಮಾಹಿತಿ ನನಗಿರಲ್ಲ. ಸುನೀಲ ನನ್ನ ಸ್ನೇಹಿತರು, ಬಹಳ ಸ್ನೇಹ ಇಲ್ಲ. ಆದ್ರೆ ಅವರ ಹಿನ್ನೆಲೆ ಬಗ್ಗೆ ತಿಳಿದಿರಲಿಲ್ಲ ಎಂದರು.
ಸುನೀಲ್ಗೆ ನಾನು ಡ್ರಾಪ್ ಮಾಡಿಲ್ಲ
ನಾನೊಬ್ಬ ಶಾಸಕ, ನಮ್ಮನ್ನು ಒಳ್ಳೆಯ ಕಾರ್ಯಕ್ರಮಕ್ಕೆ ಕರೆದಾಗ ಹೋಗ್ತೀವಿ. ಅವರು ಬಿಜೆಪಿ ಗೆ ಬರೋ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರನ್ನು ಕಾರ್ಯಕ್ರಮದ ಬಳಿಕ ಡ್ರಾಪ್ ಮಾಡಲಿಲ್ಲ ಎಂದು ಶಾಸಕರು ಹೇಳಿದರು.
ಹಿಂದೂ ಸಂಘಟನೆಗಳ ಮನವಿ ಏನಾಗಿತ್ತು?
ಹಿಂದೂಗಳ ಧಾರ್ಮಿಕ ಭಾವನೆಗೆ ಬೆಲೆ ಕೊಡದೇ ಇರುವುದು, ದೇಶದ ಕಾನೂನಿಗೆ ಬೆಲೆ ಕೊಡದೇ ಇರುವುದು, ಮೂರ್ತಿ ಪೂಜೆಯನ್ನು ನಂಬದೇ ಇರುವುದು, ವ್ಯಾಪಾರದ ಹೆಸರಿನಲ್ಲಿ ಜಿಹಾದ್ ಮಾಡುವುದು, ಹಿಂದೂಗಳ ದೇವರುಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿಕೃತಗೊಳಿಸುವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು.ನಾವು ಪೂಜಿಸುವ ಗೋವನ್ನು ಕಡಿದು ತಿನ್ನುವವರಿಗೆ ಪದೇ ಪದೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ನಮ್ಮ ಆಚರಣೆಗಳಲ್ಲಿ ನಂಬಿಕೆ ಇಲ್ಲದವರಿಗೆ ಹಿಂದೂ ಹಬ್ಬದಲ್ಲಿ ವ್ಯಾಪಾರ ಮಾಡಲು ಯಾವ ಅರ್ಹತೆ ಕೂಡ ಇಲ್ಲ ಎಂದು ಹಿಂದೂ ಸಂಘಟನೆಗಳು ಹೇಳಿವೆ.
ಆದ್ದರಿಂದ ಈ ಅಂಶಗಳನ್ನು ಗಮನಿಸಿ ಹಿಂದೂಯೇತರರಿಗೆ ಬೆಳ್ಳಿ ತೇರಿನ ಸಂದರ್ಭದಲ್ಲಿ ವ್ಯಾಪಾರ ಕೈ ಅವಕಾಶ ಮಾಡಿಕೊಡಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.