ಅದಾನಿ ಕಂಪನಿ ಮೇಲೆ ಆರ್ ಬಿಐ ನಿಗಾ: ಬ್ಯಾಂಕ್ ವಿವರ ನೀಡಲು ಸೂಚನೆ!

ಅದಾನಿ ಗ್ರೂಪ್ ಕಂಪನಿ ಬಗ್ಗೆ ವ್ಯಾಪಕ ಚರ್ಚೆ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕಂಪನಿ ಮೇಲೆ ನಿಗಾ ವಹಿಸಲು ನಿರ್ಧರಿಸಿದ್ದು, ಹಣದ ವಹಿವಾಟು ನೀಡುವಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.
ಅದಾನಿ ಗ್ರೂಪ್ ಕಂಪನಿ ಅಕ್ರಮವಾಗಿ ಬೆಳೆಯುತ್ತಿದ್ದು, ಭವಿಷ್ಯದಲ್ಲಿ ಅಪಾಯ ಕಾದಿದೆ ಎಂದು ಅಮೆರಿಕದ ತಜ್ಞರ ವರದಿ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡು ನಷ್ಟಕ್ಕೆ ಗುರಿಯಾಗಿತ್ತು.
ಇದರ ಬೆನ್ನಲ್ಲೇ ಅದಾನಿ ಗ್ರೂಪ್ ತನ್ನ ಇಪಿಎಫ್ ಅನ್ನು ವಾಪಸ್ ಪಡೆದಿದ್ದು, 20,000 ಕೋಟಿ ರೂ. ಅನ್ನು ಸಾರ್ಜನಿಕರಿಗೆ ವಾಪಸ್ ಮಾಡುವುದಾಗಿ ಸ್ವತಃ ಗೌತಮ್ ಅದಾನಿ ಪ್ರಕಟಿಸಿದ್ದರು.
ಲೋಕಸಭೆಯಲ್ಲಿ ಕೂಡ ಪ್ರತಿಪಕ್ಷಗಳು ಅದಾನಿ ಗ್ರೂಪ್ ಸಾಲ ಹಾಗೂ ಅಭಿವೃದ್ಧಿ ಕುರಿತು ಚರ್ಚೆ ನಡೆಸಲು ಅವಕಾಶ ಕೋರಿ ಪಟ್ಟು ಹಿಡಿದಿರುವುದರಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಆರ್ ಬಿಐ ಈ ಕಂಪನಿಯ ಆರ್ಥಿಕ ವಹಿವಾಟು ಕುರಿತು ನಿಗಾ ವಹಿಸಲು ತೀರ್ಮಾನಿಸಿದೆ.