ಕೊನೆಗೂ ಕೃತಿ ಸನನ್‌ ಲವ್‌ ಮ್ಯಾಟರ್‌ ಬಿಚ್ಚಿಟ್ಟ ಪ್ರಭಾಸ್‌..! ಫ್ಯಾನ್ಸ್‌ ಶಾಕ್‌

ಕೊನೆಗೂ ಕೃತಿ ಸನನ್‌ ಲವ್‌ ಮ್ಯಾಟರ್‌ ಬಿಚ್ಚಿಟ್ಟ ಪ್ರಭಾಸ್‌..! ಫ್ಯಾನ್ಸ್‌ ಶಾಕ್‌

Prabhas Kriti sanon love : ಅದು ಹೇಗೆ ಶುರುವಾಯಿತೋ, ಯಾಕೆ ಶುರುವಾಯಿತೋ ಗೊತ್ತಿಲ್ಲ, ಆದರೆ ಬಾಲಿವುಡ್‌ ಬೆಡಗಿ ಕೃತಿ ಸನನ್‌ ಹಾಗೂ ನಟ ಪ್ರಭಾಸ್‌ ಇವರಿಬ್ಬರು ಪ್ರೀತಿಸಿ ಮದುವೆಯಾಗಲಿದ್ದಾರೆ ಎಂದು ದೊಡ್ಡ ಸುದ್ದಿಯಾಗಿತ್ತು. ಇದೀಗ ಕೃತಿ ಸನನ್ ಜೊತೆಗಿನ ಡೇಟಿಂಗ್ ವಿಚಾರಗಳ ಕುರಿತು ಡಾರ್ಲಿಂಗ್‌, ಪ್ರಭಾಸ್ ಮೌನ ಮುರಿದಿದ್ದಾರೆ.

ಬಾಹುಬಲಿ ಮಾತು ಕೇಳಿದ ಫ್ಯಾನ್ಸ್‌ಗೆ ಶಾಕ್‌ ಆಗಿದೆ.

ಹೌದು, ತಾನಾಜಿ ನಿರ್ದೇಶಕ ಓಂ ರಾವುತ್ ನಿರ್ದೇಶನದ ಆದಿಪುರುಷನಟಿಸಿದ ನಂತರ ಇವರಿಬ್ಬರ ನಡುವೆ ಏನೋ ನಡಿತಿದೆ ಅಂತ ನೆಟ್ಟಿಗರ ಗುಸು ಮಾತನಾಡಿಕೊಳ್ಳುತ್ತಿದ್ದರು. ಅಲ್ಲದೆ, ಪ್ರಭಾಸ್‌ ಜೊತೆ ಮದುವೆ ಆಗೋಕೆ ಇಷ್ಟ ಅಂತ ಹೇಳಿದ್ದ ಕೃತಿ ಮಾತು ರೆಬಲ್‌ ಅಭಿಮಾನಿಗಳಿಗೆ ಸಖತ್‌ ಖುಷಿ ತಂದಿತ್ತು. ಕೊನೆಗೂ ಪ್ರಭಾಸ್‌ ಮದುವೆ ಆಗ್ತಾರೆ.. ಅಷ್ಟು ಸಾಕು.. ಅಂತ ಮಾತನಾಡಿಕೊಳ್ಳುತ್ತಿದ್ದರು. ಆದ್ರೆ ಇದೀಗ ಡಾರ್ಲಿಂಗ್‌ ಮಾತು ಕೇಳಿ ಅವರ ಅಭಿಮಾನಿಗಳಿಗೆ ಕನ್ಫೂಸ್‌ ಶುರುವಾಗಿದೆ.

ಟಾಲಿವುಡ್‌ ಹಿರಿಯ ನಟ, ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಅನ್‌ಸ್ಟಾಪಬಲ್ ಸೀಸನ್ 2ರಲ್ಲಿ ಪ್ರಭಾಸ್‌ ಭಾಗವಹಿಸಿದ್ದರು. ಈ ಸಂಚಿಕೆಯಲ್ಲಿ ಕೃತಿ ಸನನ್ ಜೊತೆ ಡೇಟಿಂಗ್‌ ವಿಚಾರವಾಗಿ ಬಾಲಕೃಷ್ಣ ಕೇಳಿದಾಗ, ಇವೆಲ್ಲ ವದಂತಿಗಳಲ್ಲಿ, ಇದರಲ್ಲಿ ಯಾವುದೇ ಸತ್ಯವಿಲ್ಲ. ನಮ್ಮ ನಡುವೆ ಉತ್ತಮ ಸ್ನೇಹಕ್ಕಿಂತ ಬಿಟ್ಟು ಬೇರೆ ಯಾವುದೇ ಸಂಬಂಧವಿಲ್ಲ ಎಂದು ಪ್ರಭಾಸ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಅನುಷ್ಕಾ ಜೊತೆ ಪ್ರಭಾಸ್‌ ಮದುವೆ ಅಂತ ಮಾತು ಕೇಳಿ ಬಂದಾಗ ಅವರು ಹೆಚ್ಚು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಕೃತಿ ವಿಚಾರದಲ್ಲಿ ಪ್ರಭಾಸ್ ಕ್ಲಿಯರ್‌ ಕಟ್‌ ಆಗಿ ಹೇಳಿದ್ದು, ಅನುಷ್ಕಾ ಶೆಟ್ಟಿಯವರನ್ನೇ ಮದುವೆ ಆಗ್ತಾರಾ ಪ್ರಭಾಸ್‌ ಎನ್ನುವ ಡೌಟ್‌ ಮೂಡುವಂತೆ ಮಾಡಿದೆ. ಒಟ್ಟಾರೆಯಾಗಿ ಇಲ್ಲಿಯವರೆಗೆ ಪ್ರಭಾಸ್ ಮತ್ತು ಕೃತಿ ಸನನ್ ನಡುವೆ ಏನೋ ನಡೆಯುತ್ತಿದೆ ಎಂಬ ವದಂತಿಗಳಿಗೆ ಬ್ರೇಕ್ ಬಿದ್ದಂತಾಗಿದ್ದು, ಪ್ರಭಾಸ್‌ ಮದುವೆ ಬಗ್ಗೆ ಕನಸುಕಟ್ಟಿಕೊಂಡಿದ್ದ ಫ್ಯಾನ್ಸ್‌ಗೆ ಮತ್ತೇ ನಿರಾಸೆ ಉಂಟಾಗಿದೆ.