ಪ್ರವಾಸಿಗರಿಗೆ ಗುಡ್ ನ್ಯೂಸ್..

ಮಂಡ್ಯ: ಚಿರತೆ ಆತಂಕದಿಂದ ಸಂಪೂರ್ಣ ಬಂದ್ ಆಗಿದ್ದ ಕೆಆರ್‌ಎಸ್ ಬೃಂದಾವನ 25 ದಿನದ ಬಳಿಕ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ. ಅರಣ್ಯ ಇಲಾಖೆ ಸೂಚನೆಯಂತೆ ಕಾವೇರಿ ನೀರಾವರಿ ನಿಗಮ ಬೃಂದಾವನ ಓಪನ್ ಮಾಡಿದೆ. KRS ಡ್ಯಾಂ & ಬೃಂದಾವನ ಸುತ್ತಮುತ್ತ ಪದೇ ಪದೇ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಚಿರತೆ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಆದರೂ ಚಿರತೆ ಸೆರೆಯಾಗಿಲ್ಲ. ಬೃಂದಾವನದ ಪ್ರಸಿದ್ದಿ ಹಾಳಾಗಬಾರದೆಂದು ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.