ರಾತ್ರಿ ಸುರಿದ ರಣ ಮಳೆಗೆ 13 ಸಾವಿರ ಕೋಳಿಗಳ ಸಾವು
ಕಳೆದ ಒಂದು ವಾರದಿಂದ ಚಿಕ್ಕ ಬಳ್ಳಾಪುರದಲ್ಲಿ ಸುರಿಯುತ್ತಿರುವ ರಣ ಮಳೆಗೆ ಸಣ್ಣಪುಟ್ಟ ಕೆರೆಗಳ ಕಟ್ಟೆಗಳೊಡೆದು ಬೆಳೆಗಳು ಕೊಚ್ಚಿ ಹೋಗಿ ಬಂಡವಾಳ ಹಾಕಿದ ರೈತ ತಲೆ ಮೇಲೆ ಕೈ ಹೊತ್ತು ಚಿಂತಿತನಾಗಿರುವ ದೃಶ್ಯಗಳು ಕಣ್ಣ ಮುಂದೆ ಇರುವಾಗಲೆ ರಾತ್ರಿ ಕೋಳಿ ಪಾರಂ ಗೆ ನುಗ್ಗಿದ ಮಳೆ ನೀರು 13 ಸಾವಿರ ಕೋಳಿಗಳ ಮಾರಣ ಹೋಮವಾಗಿದೆ. ಸುಮಾರು 40 ಲಕ್ಷದಷ್ಟು ಬಂಡವಾಳ ನಷ್ಟ ಉಂಟಾಗಿದೆ....ಮಳೆ ಬಂದು ಕೆರೆಗಳು ತುಂಬಿದ ಸಂತೋಷಕ್ಕೆ ಜನಪ್ರತಿನಿಧಿಗಳು ಭಾಗೀನ ಅರ್ಪಿಸುತಿದ್ದರೆ ಮತ್ತೊಂದೆಡೆ ಈ ರೀತಿಯ ಅವಘಡಗಳು ಸಂಭವಿಸಿ ಅಪಾರ ನಷ್ಟಕ್ಕೆ ಕಾರಣವಾಗುತ್ತಿದೆ.ಹೌದು. ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಬಳಿ ಇರುವ ಗಂಗರೇ ಕಾಲುವೆ ರೈತ ಗುಣಭೂಷಣ್ ರೆಡ್ಡಿ ಅವರ ಕೋಳಿ ಪಾರಂ ನಲ್ಲಿ ಇಂತಹ ಘಟನೆ ಜರುಗಿದೆ.ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಬಾರಿ ಮಳೆಯಿಂದ ಈ ಜಿಲ್ಲೆಯ ಎಲ್ಲಾ ಕೆರೆಗಳು, ನಾಲೆಗಳು ಭರ್ತಿಯಾಗಿವೆ.ಇನ್ನು ಎರಡು ವರ್ಷಗಳ ಕಾಲ ನೀರಾವರಿ ಕೊರತೆ ನೀಗುವ ಭರವಸೆ ಬಂದಿದೆ ಅಂತ ರೈತರು ಒಂದು ಕಡೆ ಸಂತೋಷ ಪಡುತ್ತಿದ್ದರೆ. ಮತ್ತೊಂದು ಕಡೆ ಕೆರೆಕಟ್ಟೆಗಳು ಒಡೆದು ಜಮೀನುಗಳಿಗೆ ನೀರು ನುಗ್ಗಿ ಅಫಾರ ಮಟ್ಟದ ಬೆಳೆಗಳು ಕೊಚ್ಚಿ ಹೋಗಿವೆ. ಇನ್ನು ರಾತ್ರಿ ಸುರಿದ ರಣಮಳೆಗಯಿಂದಾಗಿ ರೈತ ನಾಗಭೂಷಣರೆಡ್ಡಿ ಬಾಳಿಗೆ ನೀರು ಕುಡಿಸಿದಂತಾಗಿದೆ. ಸಾಲ ಸೋಲ ಮಾಡಿ 50 ಲಕ್ಷ ಕರ್ಚು ಮಾಡಿ ಕೋಳಿ ಫಾರಂ ಮಾಡಿ ಇನ್ನೇನು ಇನ್ನೆರಡು ದಿನಗಳಲ್ಲಿ ಕೋಳಿಗಳು ಮಾರುಕಟ್ಟೆಗೆ ರಪ್ತಾಗಲು ಮಾತುಕತೆ ಕೂಡ ಆಗಿತ್ತು. ಅದ್ರೆ ದಿಢೀರ್ ಸುರಿದ ಬಾರಿ ಮಳೆಗೆ ಪಾರಂ ಪಕ್ಕದಲ್ಲೆ ರಾಜಕಾಲುವೆಯಿಂದ ನುಗ್ಗಿದ ನೀರಿನ ರಭಸಕ್ಕೆ ಕೋಳಿ ಪಾರಂ ಪೂರ್ತಿ ಕೆರೆಯಾಗಿ ಮಾರ್ಪಟ್ಟಿದೆ. ಇದನ್ನು ಕಂಡ ರೈತ ದಿಕ್ಕುತೋಚದೆ ರಾತ್ರಿಯಿಂದ ಸುಮ್ಮನೆ ಕೋಳಿ ಪಾರಂ ಕಡೆ ನೋಡಿಕೊಂಡೆ ಕುಳಿತಿದ್ದಾರೆ. ನಾನು ಹಿಂದೆಂದೂ ಇಂಥ ಮಳೆ ನೋಡಿಲ್ಲ. 25 ವರ್ಷಗಳ ಹಿಂದೆ ಈ ತರಹ ಮಳೆ ನೋಡಿದ್ದೆ ಅಷ್ಟು ಜೋರಾಗಿ ಬೀಳುತ್ತಿತ್ತು. ಪಾರಂ ಪಕ್ಕದಲ್ಲೆ ರಾಜ ಕಾಲುವೆ ಇದ. ನಾವು ನೋಡ ನೋಡುತ್ತಲೆ ನೀರು ಕೋಳಿಫಾರಂಗೆ ನುಗ್ಗಿಬಿಡ್ತು. ಆ ಮಳೆಗೆ ನಾವು ಆಚೆ ಬರಲು ಕೂಡ ಹಾಗಲಿಲ್ಲ, ಸರಿಸುಮಾರು 50 ಲಕ್ಷ ಕರ್ಚು ಮಾಡಿ ಪಾರಂ ರೆಡಿ ಮಾಡಿದ್ವಿ. ಇದು ಮೊದಲ ಬೆಳೆ ಇನ್ನೇನು ಎರಡು ದಿನಗಳಲ್ಲಿ ಕೋಳಿ ರಫ್ತಾಗುತ್ತಿತ್ತು .ನಮ್ಮ ದುರಾದೃಷ್ಟದಿಂದ ಈ ಘಟನೆ ನಡೆದಿದೆ. ಒಟ್ಟು 25 ಟನ್ ಕೋಳಿ ತೂಕ ಬರ್ತಿತ್ತು 40 ಲಕ್ಷದ ವರೆಗೂ ಆದಾಯದಷ್ಟು ನಮಗೆ ಲಾಸ್ ಆಗಿದೆ ಸರ್ಕಾರದಿಂದ ಏನಾದರೂ ಸಹಾಯ ಮಾಡಿದ್ರೆ ನಮಗೆ ಅನುಕೂಲವಾಗುತ್ತೆ ಅಂತ ಮಾಲೀಕ ಗುಣಭೂಷಣ್ ತಮ್ಮ ದುಃಖವನ್ನು ಹೇಳಿಕೊಂಡರು.