ಬಿಸಿಲುನಾಡಿಗೆ ಮಂಜಿನ ಹೊದಿಕೆ

ಬಿಸಿಲುನಾಡು ಎಂದೇ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆ ಈಗ ಮಂಜಿನ ನಗರಿಯಾಗಿ ಪರಿವರ್ತನೆಯಾದಂತೆ ಗೋಚರಿಸಲು ಆರಂಭಿಸಿದೆ. ಸದಾಕಾಲ ಸುಡು ಬಿಸಿಲಿಗೆ ಹೆಸರಾಗಿದ್ದ ಜಿಲ್ಲೆಯಲ್ಲಿ ಮಂಜಿನ ಜೊತೆಗೆ ಮೈಕೊರೆಯುವ ಚಳಿ ಆವರಿಸಿದ್ದು, ಜನರು ಮನೆಯಾಚೆ ಬಾರದಂತೆ ಮಾಡಿದೆ. ಈ ರೀತಿಯ ವಾತಾವರಣದಿಂದ ತೋಟಗಾರಿಕೆ ಬೆಳೆಯಾದ ದ್ರಾಕ್ಷಿ & ಈರುಳ್ಳಿ ಬೆಳೆಗೆ ಹೆಚ್ಚು ಹಾನಿಯಾಗೋ ಸಾಧ್ಯತೆಯಿದೆ ಎಂದು ರೈತರ ಆತಂಕವಾಗಿದೆ.