ಬೆಂಗಳೂರು ಚಲೋ ಕೈಗೊಂಡ ಮಹದಾಯಿ ಹೋರಾಟಗಾರರು
ಹುಬ್ಬಳ್ಳಿ
ಕಳಸಾ ಬಂಡೂರಿ ಯೋಜನೆ ಸಮರ್ಪಕ ಜಾರಿಯಾಗದ ಹಿನ್ನೆಲೆ ಧಾರವಾಡ ಜಿಲ್ಲೆಯ ನವಲಗುಂದ, ನರಗುಂದ ಸೇರಿದಂತೆ ಜಿಲ್ಲೆಯ 30ಕ್ಕೂ ಅಧಿಕ ಮಹದಾಯಿ ಹೋರಾಟಗಾರರು ಹುಬ್ಬಳ್ಳಿಯಿಂದ ಬೆಂಗಳೂರು ಚಲೋ ಕೈಗೊಂಡಿದ್ದಾರೆ. ಯೋಜನೆಗೆ ಆಗ್ರಹಿಸಿ ಇಂದಿಗೆ 2250ನೇ ದಿನವಾಗಿದೆ. ಹಾಗಾಗಿ ನಾಳೆ ಮಧ್ಯಾಹ್ನ 2 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿ ಕಳಸಾ ಬಂಡೂರಿ ಕಾಮಗಾರಿ ಶೀಘ್ರವೇ ಆರಂಭಿಸುವಂತೆ ಒತ್ತಾಯಿಸಲಿದ್ದಾರೆ.