ಸದ್ಯಕ್ಕೆ ಡಿಕೆಶಿ ಬಂಧನ ಮಾಡುವ ಉದ್ದೇಶ ಇಲ್ಲ: ಕೋರ್ಟ್ಗೆ ಇ.ಡಿ.

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.) ಸಲ್ಲಿಸಿದ್ದ 2ನೇ ಇಸಿಐಆರ್ ರದ್ದು ಮಾಡುವಂತೆ ಕೋರಿ ಹಾಗೂ ಬಂಧನದಿಂದ ರಕ್ಷಣೆ ನೀಡುವಂತೆ ಮನವಿ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬುಧವಾರ ದೆಹಲಿ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ 2ನೇ ಇಸಿಐಆರ್ ಸಲ್ಲಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಇ.ಡಿ, ಸದ್ಯಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವ ಉದ್ದೇಶ ತನಗಿಲ್ಲ ಎಂದು ತಿಳಿಸಿದೆ.