ಸಾಧಾರಣ ವಹಿವಾಟು; ತೈಲ, ಗ್ಯಾಸ್, ಬ್ಯಾಂಕಿಗ್ ಕ್ಷೇತ್ರ ಏರಿಕೆ

ಸಾಧಾರಣ ವಹಿವಾಟು; ತೈಲ, ಗ್ಯಾಸ್, ಬ್ಯಾಂಕಿಗ್ ಕ್ಷೇತ್ರ ಏರಿಕೆ

ಇಂದು ಭಾರತೀಯ ಷೇರುಪೇಟೆ ಸಾಧಾರಣ ವಹಿವಾಟು ನಡೆಸಿತು. ಸೆನ್ಸೆಕ್ಸ್ 91 ಅಂಕ ಏರಿಕೆ ಕಂಡು 61,510ರಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ 23 ಅಂಕ ಏರಿಕೆಯಾಗಿ 18,267ರಲ್ಲಿ ವಹಿವಾಟು ಮುಗಿಸಿತು. ಇಂದು ಅಪೋಲೊ ಹಾಸ್ಪಿಟಲ್, ಜೆಎಸ್‍ಡಬ್ಲು ಸ್ಟೀಲ್, ಎಚ್‍ಡಿಎಫ್‍ಸಿ ಲೈಫ್, ಎಸ್‍ಬಿಐ, ಬಜಾಜ್ ಫಿನಾನ್ಸ್, ಬಿಪಿಸಿಎಲ್ ಷೇರುಗಳು ಹೆಚ್ಚು ಲಾಭ ಕಂಡವು. ಅದಾನಿ ಎಂಟರ್ಪ್ರೈಸಸ್, ಪವರ್ ಗ್ರಿಡ್, ಅದಾನಿ ಪೋರ್ಟ್ಸ್, ಹೀರೊ ಮೋಟೊಕಾರ್ಪ್, ಟೆಕ್ ಮಹೀಂದ್ರ, ಭಾರ್ತಿ ಏರ್‍ಟೆಲ್ ಹೆಚ್ಚು ನಷ್ಟ ಅನುಭವಿಸಿದವು.