ಹಿಂದಿನ ಸರ್ಕಾರದ `PSI' ನೇಮಕಾತಿಯಲ್ಲೂ ಗೋಲ್ ಮಾಲ್ : `CID' ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಬೆಂಗಳೂರು : ರಾಜ್ಯದಲ್ಲಿ 545 ಪಿಎಸ್ ಐ ನೇಮಕಾತಿ ಹಗರಣದ ಬೆನ್ನಲ್ಲೇ ಮತ್ತೊಂದು ಹಗರಣ ಬಯಲಾಗುವ ಸಾಧ್ಯತೆ ಇದ್ದು, ಹಿಂದಿನ ಪಿಎಸ್ ಐ ನೇಮಕಾತಿಯಲ್ಲೂ ಗೋಲ್ ಮಾಲ್ ನಡೆದಿದೆ ಎಂದು ಹೇಳಲಾಗುತ್ತಿದೆ.
ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ಡಿವೈಎಸ್ ಪಿ ಕಳ್ಳಾಟ ಬಯಲಾಗಿದೆ ಎನ್ನಲಾಗಿದ್ದು, 2015 ರಿಂದಲೂ ಪಿಎಸ್ ಐ ನೇಮಕಾತಿ ಅಕ್ರಮ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
2015 ರಿಂದಲೂ ಪಿಎಸ್ ಐ ನೇಮಕಾತಿ ಅಕ್ರಮ ನಡೆದಿತ್ತು ಎನ್ನಲಾಗಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲೂ ಪಿಎಸ್ ಐ ಅಕ್ರಮ ನೇಮಕಾತಿ ನಡೆದಿತ್ತು ಎನ್ನುವ ಆರೋಪ ಕೇಳಿಬಂದಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ 2 ಬಾರಿ ಪಿಎಸ್ ಐ ಅಕ್ರಮ ನಡೆದಿತ್ತು ಎಂದು ಹೇಳಲಾಗಿದೆ.
21015 ರಲ್ಲಿ 200 ಪಿಎಸ್ ಐ, 2016 ರಲ್ಲಿ 116 ಹಾಗೂ 2018-20 ರ ನಡುವೆ 300 ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡಡದಿದೆ ಎಂದು ಹೇಳಲಾಗುತ್ತಿದ್ದು, ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ಸಿಐಡಿ ಈಗಾಗಲೇ ತನಿಖೆ ನಡೆಸುತ್ತಿದ್ದು, ಇನ್ನೂ ಹಲವು ಅಧಿಕಾರಿಗಳು ಬಂಧನವಾಗುವ ಸಾಧ್ಯತೆ ಇದೆ ಎಂದು ಎನ್ನಲಾಗಿದೆ.