ಸಿದ್ದರಾಮಯ್ಯ ಕಾಲದಲ್ಲೇ ಜಾತಿ ಗಣತಿ ತಯಾರಿಸಲಾಗಿತ್ತು; ಕೇಂದ್ರ ಸಚಿವ ಎ.ನಾರಾಯಣಸ್ವಾಮಿ | Gadag |
ಸಿದ್ದರಾಮಯ್ಯ ಅವರ ಕಾಲದಲ್ಲೇ ಜಾತಿ ಗಣತಿ ತಯಾರಾಗಿದ್ದರೂ ಅದರ ಜಾರಿಗೆ ಆಗಿನ ಮಂತ್ರಿ ಮಂಡಳ ಬಿಡಲಿಲ್ಲ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ಆಯೋಗದಿಂದ ಆದ ಗಣತಿ ನಡೆಸಿದ್ದು ಸಿದ್ದರಾಮಯ್ಯ. ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಲು ೧೬೨ ಕೋಟಿ ವ್ಯಯ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಕಾಲದಲ್ಲೇ ವರದಿ ಸಿದ್ಧವಾಗಿತ್ತು. ಸದಾಶಿವ ಆಯೋಗ ವರದಿ ೧೨ ವರ್ಷದ ಹಿಂದೆಯೇ ಸಿದ್ಧವಾಗಿತ್ತು, ಜಾರಿ ಮಾಡಲು ಬಿಡಲಿಲ್ಲ. ಆಯೋಗದ ವರದಿ ಮಂಡನೆಯಾಗಲು ಅವರ ಮಂತ್ರಿಗಳು ಬಿಡಲಿಲ್ಲ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದಲ್ಲೂ ವರದಿ ಬಹಿರಂಗ ಪಡಿಸಿಲ್ಲ ಎಂದು ಸಚಿವರು ಹೇಳಿದರು. #9Live