ಈ ವರ್ಷದ ಕೇದಾರನಾಥನ ಪರಂಪರೆ ಸಂಪನ್ನ |Maharashtra|

ಮಹಾರಾಷ್ಟ್ರ ರಾಜ್ಯದ ನಾಂದೇಡ್ ಮಹಾನಗರದ ಶ್ರೀ ಗುರು ದಶಮುಖ ಆಶ್ರಮದಲ್ಲಿ ಕೇದಾರನಾಥನ ರತ್ನಖಚಿತ ಸುವರ್ಣ ಕಿರೀಟ ಧಾರಣ ಮಾಡುವ ಮೂಲಕ ಈ ವರ್ಷದ ಕೇದಾರನಾಥನ ಪರಂಪರೆ ಸಂಪನ್ನಗೊಳಿಸಲಾಯಿತು. ಶಿರಾಡೋಣಮಠದ ಭಕ್ತರು ನಡೆಸಿದ ಗುರುತ್ವಾಧಿಕಾರದ 49ನೆ ವರ್ಧಂತಿ ನಿಮಿತ್ತ ಜರುಗಿದ ಸಮಾರಂಭದಲ್ಲಿ ಭಕ್ತ ಸಮುದಾಯಕ್ಕೆ ಶುಭಾಶೀರ್ವಾದ ನೀಡಲಾಯಿತು. ದಿವ್ಯಸಾನಿಧ್ಯ ಶ್ರೀ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳು, ಈ ಸಮಾರಂಭದಲ್ಲಿ ತಪೆÇೀಕ್ಷೇತ್ರ ಕಣ್ವಕುಪ್ಪೆ, ಶ್ರೀನಿವಾಸ ಸರಡಗಿ,ಬಂತನಾಳ,ಆಲಮೇಲ್,ಅಗರ್ಖೇಡ್,ಮಾಜಲಗಾಂ ಮಠಗಳ ಶ್ರೀಗಳು, ಮಾಜಿ ಶಾಸಕ ಓಂಪ್ರಕಾಶ್ ಪೆÇಕರ್ಣ, ಬಾಲಾಜಿರಾವ್ ಪಾಂಡಾಗಳೆ, ಧರ್ಮಾಧಿಕಾರಿ, ಮಾಳಿ ಪಾಟೀಲ್, ಕರ್ನಾಟಕದ ಎಸ್.ಬಿ.ಹಿರೇಮಠ. ಎಂ.ಕೊಟ್ರೇಶಪ್ಪ, ಶಿವಯೋಗಿ ಕಂಬಾಳಿಮಠ, ಟಿ.ಹೆಚ್.ಎಂ.ವೀರೇಶ.ಎಂ.ಯು.ವೀರಭದ್ರಯ್ಯ.ಎನ್.ಮಲ್ಲನಗೌಡ,ವಿಘ್ನೇಶ್ವರ ಸೊಲ್ಲಾಪುರ, ವೀರಸಂಗಯ್ಯ, ಎನ್.ಎಂ.ಬಸವರಾಜಸ್ವಾಮಿ, ಕೆ.ಶಿವಪ್ಪ, ಶಿವಾಜಿರಾವ್, ಗುರುಸೇವಾ ಬಳಗದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.