ಮೂರು ವರ್ಷದ ಕಾನೂನು ಪದವಿ ಬಂದ್. ಮತ್ತೊಂದು ಯಡವಟ್ಟು ಮಾಡಿದ ಕರ್ನಾಟಕ ವಿಶ್ವವಿದ್ಯಾಲಯ.... |Dharwad|
ಸದಾ ಒಂದಿಲ್ಲೊಂದು ಯಡವಟ್ಟು ಮೂಲಕ ಸುದ್ದಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯ ಇದೀಗ ಮತ್ತೊಂದು ಯಡವಟ್ಟು ಮಾಡಿದೆ. ಹೌದು ಧಾರವಾಡದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಪ್ರಸ್ತುತ ವರ್ಷ ಮೂರು ವರ್ಷಗಳ ಕಾನೂನಿನ ಪದವಿ ಪ್ರವೇಶ ಸ್ಥಗಿತಗೊಳಿಸಿದೆ. ಇದರಿಂದಾಗಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಮೂರು ವರ್ಷದ ಕಾನೂನು ಪದವಿಯಿಂದ ವಂಚಿತರಾಗುತ್ತಾರೆ.ಹೀಗಾಗಿ ಕವಿವಿ ವಿದ್ಯಾರ್ಥಿಗಳಿಗೆ ಅನಾನುಕೂಲ ವಾಗದಂತೆ ನೋಡಿಕೊಳ್ಳಬೇಕಿದೆ.ಕಳೆದ ವರ್ಷವೂ ಈ ರೀತಿಯ ತೊಂದರೆ ಮಾಡಿ ಆನಂತರ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಪುನಃ ಪ್ರವೇಶ ಆರಂಭಿಸಿತ್ತು.ಇದೀಗ ಈ ವರ್ಷವೂ ಇಂತಹ ನಡೆ ಅನುಸಿರಿಸುವುದು ನೋಡಿದರೆ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂಬಂತೆ ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ವಿದ್ಯಾರ್ಥಿ ಮುಖಂಡ ಸುರೇಶ್ ಕೆ ಆರೋಪಿಸಿದ್ದಾರೆ. ಈ ಬಗ್ಗೆ ಕವಿವಿ ಕುಲಸಚಿವ ಹನುಮಂತಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಹಾರೈಕೆ ಉತ್ತರ ನೀಡುತ್ತಿದ್ದಾರೆ. ಇದು ಸರಿಯಲ್ಲ. ಹೀಗಾಗಿ ನಾವು ಕವಿವಿ ಆಡಳಿತ ಮಂಡಳಿಯ ಕಚೇರಿ ಎದುರಿಗೆ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಸುರೇಶ್ ಕೆ ಎಚ್ಚರಿಕೆ ನೀಡಿದರು........