ಅಂತೆ, ಕಂತೆ- ವದಂತಿಗಳಿಗೆ ನಟ ರಕ್ಷಿತ್ ಶೆಟ್ಟಿ ತೆರೆ

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದೆಲ್ಲ ನಿಜವಲ್ಲ.." ಎಂದಿದ್ದಾರೆ. ಹೊಂಬಾಳೆ ಫಿಲಂಸ್ ಜತೆಗೆ ರಿಚರ್ಡ್ ಆಂಟನಿ ಸಿನಿಮಾಕ್ಕೂ ರಕ್ಷಿತ್ ಹೆಚ್ಚು ಶ್ರಮ ವಹಿಸುತ್ತಿದ್ದಾರೆ. ತೆರೆಮರೆಯಲ್ಲಿ ಆ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ, ಕನ್ನಡದ ಜತೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಅವರು ನಟಿಸಲಿದ್ದಾರೆ ಎಂಬೆಲ್ಲ ಸುದ್ದಿಯಾಗಿತ್ತು.
ತಮಿಳಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ದಳಪತಿ ವಿಜಯ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಇದೀಗ ಆ ಸುದ್ದಿಯ ಬಗ್ಗೆ ರಕ್ಷಿತ್ ಮಾತನಾಡಿದ್ದಾರೆ. ಹರಿದಾಡಿದ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಈ ಚಿತ್ರ ಹಿಟ್ ಆದ್ಮೇಲೆ ಪಾರ್ಟ್-2 ವಿಷಯವೂ ಹರಿದಾಡಿತ್ತು. ಅದೇ ವಿಷಯಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಸ್ಪಷ್ಟವಾಗಿಯೇ ಈಗ ಹೇಳಿಕೊಂಡಿದ್ದಾರೆ. ಕಿರಿಕ್ ಪಾರ್ಟಿ-2 ಸಿನಿಮಾದ ಬಗ್ಗೆ ಬೇರೆ ಪ್ಲಾನ್ ಇದೆ. ಆದರೆ ಈಗ ಹರಿದಾಡುತ್ತಿರೋ ಸುದ್ದಿಗಳು ನಿಜ ಅಲ್ಲವೇ ಅಲ್ಲ. ಮುಂದೆ ಎಂದೂ ಇವು ನಿಜ ಆಗೋದೂ ಇಲ್ಲ. ಲವ್ ಯೂ ಆಲ್ ಅಂತಲೇ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.