ವಾಹನ ಸವಾರರಿಗೆ ಬಿಗ್‌ ಶಾಕ್‌ : ದಾವಣಗೆರೆಯಲ್ಲಿ ಶೇ.100ರರಷ್ಟು ಟೋಲ್ ದರ ಏರಿಕೆ

ವಾಹನ ಸವಾರರಿಗೆ ಬಿಗ್‌ ಶಾಕ್‌ : ದಾವಣಗೆರೆಯಲ್ಲಿ ಶೇ.100ರರಷ್ಟು ಟೋಲ್ ದರ ಏರಿಕೆ

ದಾವಣಗೆರೆ : ಒಂದೆಡೆ ಪೆಟ್ರೋಲ್‌, ಡಿಸೇಲ್‌ ಬೆಲೆ ಹೆಚ್ಚಳ ನಡುವೆ ಇದೀಗ ದಾವಣಗೆರೆ ನಗರದಲ್ಲಿ ದಿಢೀರ್‌ ಶೇ.100ರ ರಷ್ಟು ಟೋಲ್ ದರ ಏರಿಕೆಯಾಗಿದ್ದು, ಈ ರಸ್ತೆ ಮಾರ್ಗವಾಗಿ ತೆರಳುವ ವಾಹನ ಸವಾರರಿಗೆ ಬಿಗ್‌ ಶಾಕ್‌ ಎದುರಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಮಹಾರಾಷ್ಟ್ರ ಪ್ರವೇಶ ಮಾಡುವ ತನಕ ಬರೊಬ್ಬರಿ ಒಟ್ಟು ಹನ್ನೊಂದು ಟೋಲ್ ಸಿಗುತ್ತದೆ. ಈ ಹನ್ನೊಂದು ಟೋಲ್ ಗಳಲ್ಲಿ ಹೆದ್ದಾರಿ ಪ್ರಾಧಿಕಾರ ಬರೋಬರಿ ಶೇ- 100ರಷ್ಟು ಟೋಲ್ ಶುಲ್ಕ ಹೆಚ್ಚಳ ಮಾಡಿದೆ.ದಾವಣಗೆರೆ ಜಿಲ್ಲೆಯ ಹೆಬ್ಬಾಳ್ ಟೋಲ್ ಗೇಟ್ ಸೇರಿದಂತೆ ಬೆಂಗಳೂರಿನಿಂದ ಬೆಳಗಾವಿ ಜಿಲ್ಲೆಯ ವರೆಗೆ ಅಂದ್ರೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಮಹಾರಾಷ್ಟ್ರ ಪ್ರವೇಶ ಮಾಡುವ ತನಕ ಒಟ್ಟುಹನ್ನೊಂದು ಟೋಲ್‌ಗಳಿಗೆ ಹಣ ಕಟ್ಟಬೇಕಾಗಿದೆ. ಹೆದ್ದಾರಿ ಪ್ರಾಧಿಕಾರ ಬರೋಬರಿ ಶೇ- 100ರಷ್ಟು ಟೋಲ್ ಶುಲ್ಕ ಹೆಚ್ಚಳ ಮಾಡಿದ್ದ ಆರಾಮದಾಯಕವಾಗಿ ಕಾರುಗಳಲ್ಲಿ ತೆರಳುವ ಜನರಿಗೆ ಟೋಲ್‌ ಬಿಸಿ ಮುಟ್ಟೋದಂತೂ ಗ್ಯಾರಂಟಿಯಾಗಿದೆ. ಇನ್ಮುಂದೆ ಕಾರು ಬಿಟ್ಟು ಬಸ್ಸಿನಲ್ಲೇ ಓಡಾಟ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದಂತೂ ನಿಜ.

ದಾವಣಗೆರೆ ತಾಲೂಕಿನ ಹೆಬ್ಬಾಳ್ ಟೋಲ್ ಗೇಟ್ ನಲ್ಲಿ ದರವನ್ನೂ ದಿಢೀರ್‌ ಬದಲಾವಣೆ ಮಾಡಿದ್ದು, ಒಂದು ಲಾರಿ ಬೆಂಗಳೂರಿನಿಂದ ಮುಂಬಯಿಗೆ ಹೋಗಿ ವಾಪಸ್ಸು ಬೆಂಗಳೂರಿಗೆ ಬರಬೇಕಾದ್ರು 24 ಸಾವಿರ ರೂಪಾಯಿ ಟೋಲ್ ಗೇಟ್ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಕಾರು ಜೀಪು, ಲಘುವಾಹನ- ಹಳೆದರ- 60 ರೂಪಾಯಿ, ಹೊಸದರ 120 ರೂಪಾಯಿ, ಲಘು ವಾಣಿಜ್ಯ ವಾಹನಗಳು ಹಳೆದರ 95 ರೂಪಾಯಿ, ಹೊಸದರ 195 ರೂಪಾಯಿ, ಬಸ್ ಮತ್ತು ಟ್ರಕ್ ಹಳೆದರ 195, ಹೊಸ ದರ 410ರೂಪಾಯಿ, ತ್ರಿ ಆಕ್ಸಲ್ ವಾಹನ ಹಳೆದರ 215, ಹೊಸದರ 645 ರೂಪಾಯಿ , ಭಾರಿ ನಿರ್ಮಾಣ ವಾಹನ ಹಳೆ ದರ 630 ರೂಪಾಯಿ, ಹೊಸದರ 780 ರೂಪಾಯಿ ಆಗಿದೆ ಇದು ಬಾಡಿಗೆ ವಾಹನ ಚಾಲಕರಿಗೆ ಭಾರೀ ಹೊಡೆತವಾಗಲಿದ್ದು, ಅವರು ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಏಕಾಏಕಿ ಟೋಲ್‌ಗಳನ್ನು ಫ್ರಾರಂಭಗೊಳ್ಳುತ್ತಿದ್ದು, ವಾಹನ ಸಾವರಿಯುದ್ದಕ್ಕೂ ಮಾಲೀಕರ ಜೇಬಿಗೆ ಕತ್ತರಿ ಬೀಳುವುಂದಂತೂ ಗ್ಯಾರಂಟಿಯಾಗಿದೆ. ಸರ್ಕಾರು ಟೋಲ್‌ ವಿಚಾರವಾಗಿ ಗಮನ ಹರಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.