ವಿದ್ಯುತ್‌ ತಂತಿ ತುಂಡಾ'ದ ಹಿನ್ನೆಲೆ ಚೆನೈ- ಬೆಂಗಳೂರು ಮಾರ್ಗದ ' 8 ರೈಲುಗಳ ಸ್ಥಗಿತ ' : ಜನರ ಪರದಾಟ

ವಿದ್ಯುತ್‌ ತಂತಿ ತುಂಡಾ'ದ ಹಿನ್ನೆಲೆ ಚೆನೈ- ಬೆಂಗಳೂರು ಮಾರ್ಗದ ' 8 ರೈಲುಗಳ ಸ್ಥಗಿತ ' : ಜನರ ಪರದಾಟ

ಕೋಲಾರ : ವಿದ್ಯುತ್‌ ತಂತಿ ತುಂಡಾಗಿ ಬಿದ್ದ ಹಿನ್ನೆಲೆ ಚೆನೈ- ಬೆಂಗಳೂರು ಮಾರ್ಗದ 8 ರೈಲುಗಳು ಸ್ಥಗಿತಗೊಂಡಿದ್ದು, ಕೋಲಾರ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ

ಕೋಲಾರ ಜಿಲ್ಲೆಯ ಕೆಜಿಎಫ್‌ನ ಮಾರಿಕುಪ್ಪಂ, ಬಂಗಾರಪೇಟೆಗೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಉದ್ಯೋಗ, ಶಿಕ್ಷಣ ವ್ಯಾಪಾರ ಸೇರಿದಂತೆ ದಿನನಿತ್ಯ ರೈಲಿನಲ್ಲೇ ತೆರಳುವ ಜನರ ಪರದಾಟ ಅನುಭವಿಸುತ್ತಿದ್ದಾರೆ.ಕೋಲಾರ ಜಿಲ್ಲೆಯ ಬ್ಯಾಟರಾಯನಹಳ್ಳಿ ಬಳಿ ತುಂಡಾಗಿರುವ ವಿದ್ಯುತ್‌ ತಂತಿ ರೈಲು ಹಳಿಗೆ ಅಡ್ಡಲಾಗಿ ಬಿದ್ದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಭರದಿಂದ ದುರಸ್ಥಿಕಾರ್ಯ ನಡೆಸಲಾಗುತ್ತಿದೆ ಈ ಕಾರಣದಿಂದಾಗಿ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ ಎಂದು ರೈಲ್ವೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.