ಬ್ರಹ್ಮಚಾರಿಗಳಿಂದ ಮಹದೇಶ್ವರ ಬೆಟ್ಟಕ್ಕೆ ʼಕಾಲ್ನಡಿಗೆ ಪಾದಯಾತ್ರೆʼ : ಚಾಲನೆ ನೀಡಿದ ʼನಟ ಧನಂಜಯʼ

ಬ್ರಹ್ಮಚಾರಿಗಳಿಂದ ಮಹದೇಶ್ವರ ಬೆಟ್ಟಕ್ಕೆ ʼಕಾಲ್ನಡಿಗೆ ಪಾದಯಾತ್ರೆʼ : ಚಾಲನೆ ನೀಡಿದ ʼನಟ ಧನಂಜಯʼ

ಮಂಡ್ಯ: ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಿಲ್ಲವೆಂದು ಮನನೊಂದ ಯುವಕರು ವಧು ಸಿಗಲಿ ಎಂದು ಪ್ರಾರ್ಥನೆಗಾಗಿ ಮಂಡ್ಯದಲ್ಲಿ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಪಾದಯಾತ್ರೆ ನಡೆಸುತ್ತಿದ್ದು, ನಟ ಧನಂಜಯ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

ಪಾದಾಯಾತ್ರೆಗೆ ಭಾಗವಹಿಸುವವರಿಗೆ 3 ಷರತ್ತುಗಳೇನು ಗೊತ್ತಾ?

1. ಕಡ್ಡಾಯವಾಗಿ 30 ವರ್ಷ ದಾಟಿರಬೇಕು.

2. ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶವಿಲ್ಲ.

3. ನಿಶ್ಚಿತಾರ್ಥ ಆದವರೂ ಪಾದಯಾತ್ರೆಗೆ ಬರುವಂತಿಲ್ಲ.

4. ಕಾಲ್ನಡಿ ಮೂಲಕವೇ ಪಾದಯಾತ್ರೆ ಮಾಡಬೇಕು

ನಗರದುದ್ದಕ್ಕೂ‍ ಬ್ರಹ್ಮಚಾರಿ ಯುವಕರ ಗುಂಪು ಸೇರಿಕೊಂಡು ಘೋಷ ವಾಕ್ಯದೊಂದಿಗೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಹೊರಟಿದ್ದಾರೆ. ಈ ಸಂದರ್ಭದಲ್ಲಿ ನಟ ಧನಂಜಯಮಾತನಾಡಿ, ಡಾಲಿ, ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಗಳಲ್ಲಿ ಪಾದಯಾತ್ರೆ ವಿಷಯ ತಿಳಿದು ತಮಾಷೆ ಅನಿಸ್ತು. ಪಾದಯಾತ್ರೆ ಯಾಕೆ ಹೊಟಿದ್ದೀರಿ ಅಂತ ಕೇಳಿದಾಗ ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಎಂದರು. ಇದು ನಿಜಕ್ಕೂ ಗಂಭೀರವಾದ ವಿಚಾರವಾಗಿದೆ ಎಂದು ಮನಗಂಡಿದ್ದೇನೆ

ನಾನು ಕೂಡ ಒಂದು ಪುಟ್ಟ ಹಳ್ಳಿಯಿಂದಲೇ ಬಂದಿರೋದು. ಹಳ್ಳಿಗಳಿಗೆ ಹೋದಾಗಲೆಲ್ಲ ಯುವಕರನ್ನ ಮಾತನಾಡಿಸಿದಾಗ ಹೆಣ್ಣು ಸಿಕ್ತಿಲ್ಲ ಅಂತ ಹೇಳುತ್ತಾರೆ. ಕಾಲ್ನಡಿಗೆ ಪಾದಯಾತ್ರೆ ಮಾತ್ರ ಅಲ್ಲ ಇದು ಜಾಗೃತಿ ಕಾರ್ಯಕ್ರಮವಾಗಿದೆ. ಪಾದಯಾತ್ರೆ ಹೊರಟಿರುವವರು ಮುಂದಿನ ವರ್ಷ ಮದುವೆಯಾಗಿ ಬೆಟ್ಟಕ್ಕೆ ಹೋಗಲಿ ಹಾರೈಸಿದ್ದಾರೆ.