ಕುಂಟ ಮಂಜನ‌ ಮರ್ಡ್ ರ್ ಏಳು ಜನರ ಬಂಧನ

ಕುಂಟ ಮಂಜನ‌ ಮರ್ಡ್ ರ್ ಏಳು ಜನರ ಬಂಧನ

ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸೆ 28 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದ ಕುಂಟ ಮಂಜನ (43) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೌಲ್ ಬಜಾರ್ ಠಾಣೆಯ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಎಸ್ಪಿ ಸೈದುಲ ಅಡಾವತ್ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ. ಕೌಲ್‌ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಬಿ ವಾಸುಕುಮಾರ್ ಮತ್ತು ಪೊಲೀಸ್‌ ಸಬ್‌ ಇನ್ಸಪೆಕ್ಟರ್ ಅಮಿತಾ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹುಸೇನಿ ಅಲಿಯಾಸ್ ಲಕ್ಷಣ 29 ವರ್ಷ ಕಮಲಾಪುರ, ಭಾಸ್ಕರ್ 27 ವರ್ಷ ಬಳ್ಳಾರಿ, ಸಂತೋಷ್ ಕುಮಾರ್ ಅಲಿಯಾಸ್ ಸಿರಿ 26 ವರ್ಷ ಮರಿಸ್ವಾಮಿ ಮಠ ಹತ್ತಿರ ಬಳ್ಳಾರಿ, ಸರ್ವರ್36 ವರ್ಷ ಬಂಡಿಮೋಟ ಬಳ್ಳಾರಿ, ಇಲಿಯಾಸ್ 58 ವರ್ಷ ಜವಾರಿ ಸ್ಟ್ರೀಟ್ ಬಳ್ಳಾರಿ, ಪ್ರಭಾಕರ್ 30 ವರ್ಷ ಹಾಗು ರಘು 28 ವರ್ಷ, ರಾಜೇಶ್ವರಿ ನಗರ ಬಳ್ಳಾರಿ.

ಇಲಿಯಾಸ್ ಹಾಗು ಮೃತ ಮಂಜುನಾಥ್ ಅವರಿಗೆ ಅಕ್ಕಿ ವ್ಯಾಪಾರದಲ್ಲಿ ಹಳೆ ವೈಶಮ್ಯ ಇದ್ದುದರಿಂದ, ಹಾಗು ಆರೋಪಿ ಭಾಸ್ಕರ್ ಹಾಗು ಸರ್ವ‌ರ್ಚ ಅವರಿಗೂ ಮಂಜುನಾಥರವರೊಂದಿಗೆ ವೈಶಮ್ಯ ಇದ್ದುದರಿಂದ ಇಲಿಯಾಸ್‌ನು ಭಾಸ್ಕರನಿಗೆ ಮಂಜುನಾಥನನ್ನು ಕೊಲೆ ಮಾಡಿದರೆ ಹಣ ಕೊಡುವುದಾಗಿ ತಿಳಿಸಿದ್ದರಿಂದ ಭಾಸ್ಕರನು ಸರ್ವರ್, ಸಂತೋಷ್ ಅನಿಲ್‌, ಹುಸೇನಿರವರೊಂದಿಗೆ ಮಂಜುನಾಥನನ್ನು ಕೊಲೆ ಮಾಡಲು ಒಳಸಂಚು ಮಾಡಿದ್ದರು.

ಅನಿಲ್‌ ಹಾಗು ಹುಸೇನಿಯು ಮಂಜುನಾಥನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಆಪಾದಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಎರಡು ಪಲ್ಸರ್ ಮೋಟಾರ್ ಸೈಕಲ್, 7 ಮೊಬೈಲ್‌ಗಳು ಹಾಗೂ ಕೊಲೆ ಮಾಡಲು ಉಪಯೋಗಿಸಿದ ಮಚ್ಚುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.