ಸೊಲೊಮನ್ ದ್ವೀಪದಲ್ಲಿ 7.0 ತೀವ್ರತೆ ಭೂಕಂಪ

ಸೊಲೊಮನ್ ದ್ವೀಪಗಳಲ್ಲಿ ತೀವ್ರ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿರುವುದರ ಬೆನ್ನಲ್ಲೇ ಸುಲೊಮನ್ ದ್ವೀಪದಲ್ಲಿ ಸುನಾಮಿಯ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಮಂಗಳವಾರ ಬೆಳಗ್ಗೆ 7 ಗಂಟೆ 33 ನಿಮಿಷಕ್ಕೆ ಸೊಲೊಮನ್ ದ್ವೀಪಗಳ ಮಲಂಗೋ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆಯು 7.0 ರಷ್ಟು ದಾಖಲಾಗಿದೆ. ಪೆಸಿಫಿಕ್ ಕೇಂದ್ರದಿಂದ ಸುನಾಮಿ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.