ಭಾರತದಲ್ಲಿ ನೆಲೆಸಿರುವ ಅಫ್ಘಾನ್ ವಿಚ್ಛೇದಿತ ಮಹಿಳೆಗೆ ಗಲ್ಲುಶಿಕ್ಷೆ ವಿಧಿಸಿದ ತಾಲಿಬಾನ್ ..!
ಭಾರತದಲ್ಲಿ ನೆಲೆಸಿರುವ ಅಫ್ಘಾನ್ ವಿಚ್ಛೇದಿತ ಮಹಿಳೆಗೆ ಗಲ್ಲುಶಿಕ್ಷೆ ವಿಧಿಸಿದ ತಾಲಿಬಾನ್ ..!
ಆಕೆ ತನ್ನ ಪತಿ ತಾಲಿಬಾನ್ ನ ಸಕ್ರಿಯ ಸದಸ್ಯ ಎಂದು ತಿಳಿದ ನಂತರ ವಿಚ್ಛೇದನ ಪಡೆದಿದ್ದಳು.ಈ ಅಪರಾಧಕ್ಕಾಗಿ ಅವಳಿಗೆ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಿದ್ದಾರೆ..!
ಪ್ರಸ್ತುತ, ಈ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ಆಕೆಯ ಇನ್ನಿಬ್ಬರು ಹೆಣ್ಣು ಮಕ್ಕಳನ್ನು ಆಕೆಯ ಪತಿ ತಾಲಿಬಾನ್‌ಗೆ ಮಾರಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆ ಪ್ರಕಾರ, ಅಫ್ಘಾನಿಸ್ತಾನಕ್ಕೆ ಮರಳಲು ಭಯಪಡಲು ತಾಲಿಬಾನ್ ಈಗ ಆಕೆಯ ಮೇಲೆ ಮರಣದಂಡನೆ ಹೊರಡಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣದ ನಂತರ, ಸಾವಿರಾರು ಅಫ್ಘಾನ್ ಜನರು ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದು, ಅಲ್ಲಿನ ಮಹಿಳೆಯರು ಹೆದರುತ್ತಾರೆ.
ದೆಹಲಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿರುವ ಈ ಮಹಿಳೆಯು ಇಬ್ಬರು ಹೆಣ್ಣುಮಕ್ಕಳನ್ನು ಒಳಗೊಂಡಂತೆ ತನಗಾಗಿ ಒಂದು ಮನೆಯನ್ನು ನಿರ್ಮಿಸಿಕೊಂಡಿದ್ದಾಳೆ. ಮಾಧ್ಯಮದ ಮುಂದೆ ಈಕೆ ತನ್ನ ದುಃಖವನ್ನು ಹಂಚಿಕೊಂಡಿದ್ದಾಳೆ ಮತ್ತು ಆಕೆಯ ಪತಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ತಾಲಿಬಾನ್‌ಗೆ ಮಾರಿದ್ದ ಎಂದು ಹೇಳಿದ್ದಾಳೆ.
ಮಹಿಳೆ 13 ಮತ್ತು 14 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಾಳೆ. ತನ್ನ ಮದುವೆಯ ನಂತರ, ತನ್ನ ಪತಿ ತಾಲಿಬಾನ್ ನ ಸಂಘಟನೆಯ ಸದಸ್ಯ ಎಂದು ತಿಳಿದುಬಂದಿದೆ. ಇದರ ನಂತರ ಆತ ನನ್ನ ತಲೆ, ಕುತ್ತಿಗೆಗೆ ನಾಲ್ಕು ಬಾರಿ ಇರಿಯಲು ಪ್ರಯತ್ನಿಸಿದ್ದಾನೆ. ಈಗಲೂ ಗಾಯದ ಗುರುತುಗಳಿವೆ ಎಂದು ಮಹಿಳೆ ಹೇಳಿದಳು.”
ನನ್ನ ಇತರ ಇಬ್ಬರು ಹೆಣ್ಣುಮಕ್ಕಳನ್ನು ತಾಲಿಬಾನ್‌ಗೆ ಮಾರಿಕೊಂಡಿರುವ ಬಗ್ಗೆ ನನ್ನ ಬಳಿ ಮಾಹಿತಿಯಿಲ್ಲ. ನನ್ನ ಈ ಇಬ್ಬರು ಹೆಣ್ಣುಮಕ್ಕಳನ್ನು ಮಾರುವುದಾಗಿ ನನ್ನ ಪತಿ ಹೇಳಿದ್ದಾನೆ, ನಂತರ ನಾನು ಜೀವಭಯದಿಂದ ಅಫ್ಘಾನಿಸ್ತಾನವನ್ನು ತೊರೆಯಬೇಕಾಯಿತು” ಎಂದು ಅವಳು ಹೇಳಿದ್ದಾಳೆ .
ಅಫ್ಘಾನಿಸ್ತಾನಕ್ಕೆ ಮರಳಲು ಬಯಸುತ್ತೀರಾ ಎಂದು ಕೇಳಿದಾಗ, ಆಕೆ ಎಂದಿಗೂ ತನ್ನ ತಾಯ್ನಾಡಿಗೆ ಮರಳುವುದಿಲ್ಲ ಎಂದು ಹೇಳಿದ್ದಾಳೆ. “ತಾಲಿಬಾನ್ ಗಳು ನನಗೆ ‘ಡೆತ್ ವಾರಂಟ್’ ಹೊರಡಿಸಿದ್ದಾರೆ. ಅವರು ನನ್ನ ಇನ್ನಿಬ್ಬರು ಹೆಣ್ಣುಮಕ್ಕಳನ್ನೂ ಕರೆದುಕೊಂಡು ಹೋಗುತ್ತಾರೆ. ಭಯೋತ್ಪಾದಕ ಗುಂಪು ‘ಮಕ್ಕಳನ್ನು ಖರೀದಿಸಲು ಹಣವನ್ನು ಖರ್ಚು ಮಾಡಿದೆ, ಅಲ್ಲಿರುವ ನನ್ನ ಹೆಣ್ಣುಮಕ್ಕಳ ಜೀವಕ್ಕೆ ಅಪಾಯವಿದೆ ಎಂದು ಹೆದರಿ ಅಫ್ಘಾನಿಸ್ತಾನಕ್ಕೆ ಹಿಂತಿರುಗುತ್ತೇನೆ ಎಂದು ಅವರು ಭಾವಿಸಿದ್ದಾರೆ ಎಂದು ಹಯಾತ್ ಹೇಳಿದರು.
ಅವಳು ಅಫ್ಘಾನಿಸ್ತಾನದಿಂದ ತಪ್ಪಿಸಿಕೊಂಡಿದ್ದು ಹೇಗೆ ಎಂದು ಕೇಳಿದಾಗ, “ಆ ಸಮಯದಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರಲಿಲ್ಲ, ನಾನು ನನ್ನ ವೀಸಾಕ್ಕೆ ಅರ್ಜಿ ಹಾಕಿದ್ದೆ, ಅದಕ್ಕೂ ಮೊದಲು ನಾನು ಭಾರತಕ್ಕೆ ಒಮ್ಮೆ ಭೇಟಿ ನೀಡಿದ್ದೆ ಹಾಗಾಗಿ ನನಗೆ ಸ್ವಲ್ಪ ಜ್ಞಾನವಿತ್ತು. ಅನೇಕ ಜನರು ನನಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾಳೆ.. ”
ನಂತರದಲ್ಲಿ ನಾನು ಹಿಂದಿ ಮಾತನಾಡಲು ಕಲಿತೆ. ನನಗೆ ಹಿಂದಿಯಲ್ಲಿ ಮಾತನಾಡಲು ಇಷ್ಟ. ಬಾಲಿವುಡ್ ಚನಚಿತ್ರ ನೋಡುವ ಮೂಲಕ ಕಲಿತೆ ಎಂದು ತಿಳಿಸಿದ್ದಾಳೆ.
ಇಂದು ಅಫ್ಘಾನಿಸ್ಥಾನವು ಸಂಪೂರ್ಣವಾಗಿ ಹಾಳಾಗಿದೆ, ನಾನು ಭಾರತದಲ್ಲಿ ಸಂತೋಷವಾಗಿದ್ದೇನೆ.
“ತಾಲಿಬಾನ್ ವಿರುದ್ಧ ಧ್ವನಿ ಎತ್ತಲು ಇತರ ಅಫ್ಘಾನ್ ಜನರು ಮಾಧ್ಯಮದ ಮುಂದೆ ಬರುವುದಕ್ಕೆ ಹಿಂದೇಟು ಹಾಕುತ್ತಿರುವುದರಿಂದ ನಮಗೆ ಭಾರತೀಯ ಸರ್ಕಾರದ ಸಹಾಯ ಬೇಕು ಎಂದು ಹೇಳಿದ್ದಾಳೆ.
ಇರಾಕ್‌ನಲ್ಲಿ ವಾಸಿಸುತ್ತಿರುವ ನನ್ನ ತಂದೆಗೆ ಅನೇಕ ಪತ್ರಗಳು ಬಂದಿವೆ, ನನ್ನನ್ನು ಮರಳಿ ಅಫ್ಘಾನಿಸ್ತಾನಕ್ಕೆ ಕರೆಸುವಂತೆ ಬೆದರಿಕೆ ಒಡ್ಡಿದವು, ತಾಲಿಬಾನ್‌ಗಳು ಕೂಡ ನನ್ನ ಸ್ಥಳವನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ತಂದೆ ಹೇಳಿದ್ದಾರೆ.
ಈಕೆ ಪ್ರಕಾರ, ಆಕೆ ತನ್ನ ಗಂಡನನ್ನು ವಿಚ್ಛೇದನ ಮಾಡಲು ಬಯಸಿದ್ದಳು ಅದು ಅಫ್ಘಾನಿಸ್ತಾನದಲ್ಲಿ ಸುಲಭವಲ್ಲ. ಆಕೆಯ ತಂದೆ ಮತ್ತು ಇತರ ಕುಟುಂಬ ಸದಸ್ಯರು ನಿರಂತರ ಬೆದರಿಕೆ ಎದುರಿಸುತ್ತಿದ್ದರು, ಆದರೆ ಎಲ್ಲವನ್ನೂ ಬಿಟ್ಟು ಆಕೆ ತನ್ನ ಪತಿಯನ್ನು ವಿಚ್ಛೇದನ ಮಾಡಲು ಯಶಸ್ವಿಯಾದರು ಮತ್ತು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಯಶಸ್ವಿಯಾಗಿ ಭಾರತಕ್ಕೆ ಪಲಾಯನ ಮಾಡಿದರು.