ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್; ಪೊಲೀಸರು ಹೇಳಿದ್ದೇನು..?

ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್; ಪೊಲೀಸರು ಹೇಳಿದ್ದೇನು..?

ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್; ಪೊಲೀಸರು ಹೇಳಿದ್ದೇನು..?

ಮೈಸೂರು: ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಉತ್ತರ ಪ್ರದೇಶದ ವೈದ್ಯಕೀಯ ವಿದ್ಯಾರ್ಥಿಯನ್ನು ನಗರದ ಹೊರವಲಯದಲ್ಲಿ ಅಪರಿಚಿತರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ (Gang Rape) ಘಟನೆ ಮೈಸೂರನ್ನು ಬೆಚ್ಚಿ ಬೀಳಿಸಿದೆ. ಸ್ನೇಹಿತನ ಜೊತೆ ಕುಳಿತಿದ್ದ ವಿದ್ಯಾರ್ಥಿಯನ್ನು ಎಣ್ಣೆ ಪಾರ್ಟಿ ಮಾಡುತ್ತಿದ್ದ ಪುಂಡರಗುಂಪು ನಿರ್ಜನ ಪ್ರದೇಶಕ್ಕೆ ಅತ್ಯಾಚಾರ ಎಸಗಿದೆ.
ಇಡೀ ಘಟನೆಯಿಂದ ಸಾಂಸ್ಕೃತಿಕ ನಗರಿಯ ಮರ್ಯಾದೆ ದೇಶಾದ್ಯಂತ ಹರಾಜಾಗಿದೆ. ನಿನ್ನೆ ಸಂಜೆ (ಮಂಗಳವಾರ) ಮೈಸೂರು ಹೊರವಲಯದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಈ ಘಟನೆ ನಡೆದಿದೆ. ನಿನ್ನೆ ವಿದ್ಯಾರ್ಥಿನಿ ಹಾಗೂ ಆತನ ಸ್ನೇಹಿತ ಇಬ್ಬರು ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಲೇಔಟ್ ಗೆ ಬಂದಿದ್ದಾರೆ. ಇಬ್ಬರು ಮಾತನಾಡುತ್ತಿದ್ದ ವೇಳೆ ಎಣ್ಣೆ ಪಾರ್ಟಿ ಮಾಡುತ್ತ ಕುಳಿತಿದ್ದ ಐವರ ಗ್ಯಾಂಗ್ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಎಸಗಿದೆ.
ಗ್ಯಾಂಗ್ ಆರಂಭದಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿತು, ಆದರೆ ಏನೂ ಸಿಗದಿದ್ದಾಗ, ಆಕೆಯ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಮತ್ತು ಅವರು ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.