ಕೊಲೆ ಆರೋಪಿಯೊಬ್ಬ ಜೈಲಿನಲ್ಲೇ ಬೆಡ್ ಶೀಟ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಕೊಲೆ ಆರೋಪಿಯೊಬ್ಬ ಜೈಲಿನಲ್ಲೇ ಬೆಡ್ ಶೀಟ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಧಾರವಾಡ: ಕೊಲೆ ಆರೋಪಿಯೊಬ್ಬ ಕೇಂದ್ರ ಕಾರಾಗೃಹದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಆನಂದ್ ದುಧನಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ. ಈತ ಅಕ್ಟೋಬರ್ 14 ರಂದು ಮಹಿಳೆಯ ಹತ್ಯೆ ಆರೋಪದಲ್ಲಿ ಜೈಲು ಸೇರಿದ್ದನು.

ಧಾರವಾಡದ ಜಿಲ್ಲಾಸ್ಪತ್ರೆ ಎದುರು ಸವಿತಾ ಕಿತ್ತೂರು ಎನ್ನುವವರನ್ನು ಕೊಲೆ ಮಾಡಿರುವ ಆರೋಪ ಆನಂದ್ ವಿರುದ್ಧ ಕೇಳಿಬಂದಿತ್ತು.

ಈ ಬಗ್ಗೆ ಧಾರವಾಡ ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿ ವಿಚಾರಣೆ ನಡೆಸಿದ್ದರು. ಇದೀಗ ಕಾರಾಗೃಹದಲ್ಲಿ ನೀಡಿದ್ದ ಬೆಡ್ ಶೀಟ್​ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.