ವಾರಣಾಸಿ ಪ್ರವಾಸದ ಕುರಿತು ಪೂರ್ವಭಾವಿ ಸಭೆ
ದಿನಾಂಕ:15.12.2021ರ ಸೋಮವಾರದಂದು ಮಾನ್ಯ ಅಧ್ಯಕ್ಷರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೆಟ್ಟಿ ರವರು ಮತ್ತು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿಯವರಾದ ಶ್ರೀಮತಿ ಕೆ.ಎನ್. ಅನುರಾಧ,ಐ.ಎ.ಎಸ್ ರವರುಗಳು ಮುಂಬರುವ ಮಾನ್ಯ ರೇಷ್ಮೆ ಸಚಿವರಾದ ಶ್ರೀ ಕೆ.ನಾರಾಯಣಗೌಡ ರವರ ಜೊತೆಯಲ್ಲಿ ಕೈಗೊಳ್ಳಲಿರುವ ವಾರಣಾಸಿ ಪ್ರವಾಸದ ಕುರಿತು ಪೂರ್ವಭಾವಿ ಸಭೆ ನಡೆಸಿ, ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಂಡಳಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಿಶ್ವನಾಥ್ ರವರು ಉಪಸ್ಥಿತರಿದ್ದರು.