ಇಡೀ ದೇಶವೇ ಬಾಲಿವುಡ್ ಪರ ನಿಲ್ಲಬೇಕು: ನಟ ಕಿಶೋರ್

ಕನ್ನಡದ ಖ್ಯಾತ ನಟ ಕಿಶೋರ್ ನೀಡುತ್ತಿರುವ ದಿನಕ್ಕೊಂದು ಹೇಳಿಕೆಗಳು ಭಾರತೀಯ ಸಿನಿಮಾ ರಂಗದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕುತ್ತಿವೆ. ಇದೀಗ ಬಾಲಿವುಡ್ ನಲ್ಲಿ ನಡೆಯುತ್ತಿರುವ ಬಾಯ್ಕಾಟ್ ಕುರಿತಾಗಿಯೂ ಕಿಶೋರ್ ಬರೆದುಕೊಂಡಿದ್ದಾರೆ. ಬಾಲಿವುಡ್ ಅನ್ನು ನಾವು ರಕ್ಷಿಸಬೇಕು. ಇಡೀ ದೇಶವೇ ಬಾಲಿವುಡ್ ಪರ ನಿಲ್ಲಬೇಕು. ಅನೇಕ ಸಿನಿಮಾಗಳು ಬಾಯ್ಕಾಟ್ ಗೆ ಗುರಿಯಾದವು. ದ್ವೇಷದ ರಾಜಕೀಯವನ್ನು ಖಂಡಿಸಿ ಬಾಲಿವುಡ್ ನ ಪರವಾಗಿ ನಿಲ್ಲುವ ಕಾಲ ಬಂದಿದೆ. ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.