ಮಕ್ಕಳೆಲ್ಲರೂ ದೈಹಿಕವಾಗಿ ಸದೃಢರಾಗಿ
ಅಣ್ಣಿಗೇರಿ
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಗುರುವಾರ ಗ್ರಾಮದ ಸರಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೆÇೀಷಣೆ ಅಭಿಯಾನ ಕಾರ್ಯಕ್ರಮವು ಗ್ರಾಮಪಂಚಾಯತಿ ಉಪಾಧ್ಯಕ್ಷರಾದ ಸಂಜೀವ್ ರೆಡ್ಡಿ ಬಾಲರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಸಿಗೆ ನೀರುಣಿಸುವ ಮುಖಾಂತರ ನೆರವೇರಿತು. ಈ ಸಂದರ್ಭದಲ್ಲಿ ಬಾಲರೆಡ್ಡಿ ಮಾತನಾಡಿ, ಮಕ್ಕಳೆಲ್ಲರೂ ದೈಹಿಕವಾಗಿ ಸದೃಢರಾಗಬೇಕು. ಮಕ್ಕಳು ಪ್ರತಿದಿನ ವಿವಿಧ ತರಹದ ತರಕಾರಿ, ವಿಟಮಿನ್ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಹಾಗೂ ಮನೆಯಲ್ಲಿ ಪಾಲಕರು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿಗಳಾದ ನಾಯಕ್, ಮುಖ್ಯ ಶಿಕ್ಷಕರಾದ ಬೋರಾಣಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕರು ಗ್ರಾಮದ ಗುರುಹಿರಿಯರು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು