ತಡವಾಗಿ ಬರ್ತಾರೆ ಆಸ್ಪತ್ರೆ ಸಿಬ್ಬಂದಿ, ಹೀಗಾದ್ರೆ ರೋಗಿಗಳ ನೋವು ಕೇಳುವವರ್ಯಾರು?
ಗದಗ ಗಜೇಂದ್ರಗಡ
ಸರಕಾರಿ ಆಸ್ಪತ್ರೆ ಎಂದರೆ ಸಾಕು ಅದನ್ನು ಬಡವರ ಪಾಲಿನ ಆಶಾಕಿರಣ ಎಂತಲೆ ಕರೆಯಲಾಗುತ್ತದೆ. ಆದರೆ ಗದಗ ಜಿಲ್ಲೆ ಗಜೇಂದ್ರಗಡದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿದೆ, ಇಂತಹ ಪರಿಸ್ಥಿತಿ ನಡುವೆ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ, ಎಕ್ಸರೇ, ಸ್ಕ್ಯಾನರ್ ಸಿಬ್ಬಂದಿಗಳು ಮಾತ್ರ ತಡವಾಗಿ ಬರುತ್ತಿದ್ದು, ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳದ ಕುಷ್ಟಗಿ, ಯಲಬುರ್ಗಾ, ಕುಕನೂರು, ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಹಳ್ಳಿಗಳ ಜನರಿಗೆ ಇದೇ ಆಸ್ಪತ್ರೆ ಸಂಜೀವಿನಿ ಇದ್ದಂತೆ, ಆದರೆ ಆಸ್ಪತ್ರೆ ಸಿಬ್ಬಂದಿಯ ಭಾರೀ ನಿರ್ಲಕ್ಷ್ಯದಿಂದ ರೋಗಿಗಳು ಹೆಣಗಾಡುವಂತಾಗಿದೆ. ಸರ್ಕಾರ ಪ್ರತಿ ತಿಂಗಳು ಸಂಬಳ ಕೊಡುತ್ತಿದ್ದರೂ ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸುವಲ್ಲಿ, ಹಿಂದೇಟು ಹಾಕುತ್ತಿದ್ದಾರೆ. ಈಗಾಲಾದ್ರೂ ಎಚ್ಚೆತ್ತುಕೊಂಡು ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ಬರುವಂತೆ ಎಚ್ಚರಿಕೆ ನೀಡಬೇಕು, ಇಲ್ಲದಿದ್ದರೆ ಅಮಾನತು ಮಾಡಬೇಕು ಎಂದು ಇಲ್ಲಿನ ಜನರ ಒತ್ತಾಯವಾಗಿದೆ.