ಸಾರ್ವಜನಿಕ ಗಣೇಶ ಮೂರ್ತಿಗೆ ತಡವಾಗಿ ಅನುಮತಿ: ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಹೆಚ್ಚಿದ ಬೇಡಿಕೆ | Hubli |

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬದ ಸಂಭ್ರಮ ಕಳರಗಟ್ಟಿದೆ. ಸಾರ್ವಜನಿಕ ಗಣೇಶೋತ್ಸವಕ್ಕಿಂತಲೂ ಮನೆ ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ಪೂಜಿಸುವವರ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಸರ್ಕಾರ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ತಡವಾಗಿ ಅನುಮತಿ ನೀಡಿದೆ.ಹೀಗಾಗಿ ಮನೆ ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಚಿಕ್ಕ ಚಿಕ್ಕ ಮೂರ್ತಿಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಗಣೇಶ ಮೂರ್ತಿ ಕೊಳ್ಳುವವರು ಖರೀದಿಸಲು ಮುಗಿಬಿದಿದ್ದಾರೆ. ಸಾರ್ವಜನಿಕ ಗಣೇಶನಿಗೆ ನೂರೆಂಟು ವಿಗ್ನ. ಸಾರ್ವಜನಿಕ ಗಣೇಶ ಮೂರ್ತಿಗೆ ಸರ್ಕಾರ ಕೊಕ್ಕೆ ಹಾಕಿದ್ದರಿಂದ ಮನೆ ಮೆನೆ ಗಣೇಶನಿಗೆ ಜನರು ಜೈ ಎನ್ನುತ್ತಿದ್ದಾರೆ. ಅದರಲ್ಲೂ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳ ಅಂದ, ಚಂದಕ್ಕೆ ಜನರು ಮಾರು ಹೋಗುತ್ತಿದ್ದಾರೆ. ಪರಿಸರ ಸ್ನೇಹಿ ಗಣೇಶನ ಬೆಲೆ ಹೆಚ್ಚಾದರೂ ಕೂಡ ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಗಣಪತಿ ಬಪ್ಪ ಮೋರಯಾ ಅಂತ ತಲೆ ಮೇಲೆ ಗಣೇಶನನ್ನು ಹೊತ್ತು ಕುಣಿಯುತ್ತಿದ್ದಾರೆ.