ಕೊರೊನಾ & ಓಮಿಕ್ರಾನ್ ನಾಶಕ್ಕಾಗಿ ಚಂಡಿ ಹೋಮ
ಅದು ಸರ್ವಂ ಕಲ್ವಿದಂ ಬ್ರಹ್ಮ ಎಂಬ ಊವಾಚವನ್ನ ಸಾರಿದ ಸದ್ಗುರು ಸಿದ್ಧಾರೂಢರ ಪರಂಪರೆಯನ್ನೇ ಬೆಳಗುತ್ತಿರುವ ಭವ್ಯ ಆಶ್ರಮ ,ಸಿದ್ಧಾರೂಢ ಯತಿಗಳ ಶಿಷ್ಯೋತ್ತಮರ ಬ್ರಹ್ಮೋಪಾಸನೆಯ ಶೃದ್ಧಾಕೇಂದ್ರವಾಗಿ ಸಾಗಿಬಂದ ಆ ಆಶ್ರಮದಲ್ಲಿ ಜಗತ್ ಕಲ್ಯಾಣಕ್ಕಾಗಿ ಹೋಮಾದಿ ಕೈಂಕರ್ಯಗಳು ನಡೆದವು.ಅಷ್ಟೇ ಅಲ್ಲದೇ ಹಿಂದೂ ಜನಜಾಗೃತಿ ಕಾರ್ಯಕ್ರಮಗಳು ಜರುಗಿದ್ವು. ಹಾಗಿದ್ರೆ ಶೃದ್ಧಾಭಕ್ತಿಜ್ಞಾನ ಉಕ್ಕಿಸುವ ಪರಂಪರೆಯ ಆ ಆ ಆಶ್ರಮ ಎಲ್ಲಿದೆ ? ಅಲ್ಲಿ ನಡೆದ ಕಾರ್ಯಕ್ರಮಗಳಾದ್ರೂ ಏನೆಂಬುದರ ಕುರಿತಾದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಬನ್ನಿ ನೋಡ್ಕೊಂಡ್ ಬರೋಣ . ಹೌದು ವಿದ್ಯಾಕಾಶೀ ಧಾರವಾಡ ಮಹಾನಗರದಿಂದ ಸ್ವಲ್ಪ ದೂರದಲ್ಲಿರುವ ದೇವರ ಹುಬ್ಬಳ್ಳಿಯಲ್ಲಿ ಈ ಆಶ್ರಮವಿದೆ.ಸಿದ್ದಾರೂಢರ ಹೆಸರಿನಲ್ಲಿರುವ ಈ ಆಶ್ರಮದ ಹೆಸರು ಶ್ರೀ ಸಿದ್ಧಾಶ್ರಮ.ಸಿದ್ಧಾರೂಢರ ಪರಮ ಶಿಷ್ಯರಾದ ನಾಗಭೂಷಣ ಯತಿವರ್ಯರಿಂದ ಸ್ಥಾಪಿತಗೊಂಡ ಈ ಆಶ್ರಮ ಇದೀಗ ಅವರ ಶಿಷ್ಯರಾದ ಸಿದ್ಧ ಶಿವಯೋಗಿಗಳಿಂದ ಆಧ್ಯಾತ್ಮಕೇಂದ್ರವಾಗಿ ಮುಂದುವರೆಯುತ್ತಿದೆ.
ಇಲ್ಲಿ ಕಳೆದ ೮೦ ವರ್ಷಗಳಿಂದ ಜಾತ್ರಾ ಮಹೋತ್ಸವ ನಡೆಯುತ್ತ ಬಂದದ್ದೂ ಈ ಆಶ್ರಮದ ಭವ್ಯ ಇತಿಹಾಸಕ್ಕೆ ಹಿಡಿದ ಕೈಗನ್ನಡಿ.ಅಂತೆಯೇ ಈ ವರ್ಷವೂ ಸಹ ೫ ದಿನಗಳ ಕಾಲ ಭಿನ್ನ-ವಿಭಿನ್ನವಾಗಿ ನಡೆಯುತ್ತಿದೆ. ಈಡೀ ಪ್ರಪಂಚವನ್ನೇ ದಿಗ್ಭ್ರಾಂತಗೊಳಿಸಿದ ಹಾಗೂ ಸಂಕಷ್ಟಕ್ಕೀಡು ಮಾಡಿದ ಕರೋನಾ ಹಾಗೂ ಓಮಿಕ್ರಾನ್ ನಂತಹ ಮಹಾಮಾರಿ ರೋಗಗಳು ನಾಶವಾಗಲಿ,ಸಕಲರಿಗೂ ಒಳಿತಾಗಲಿ ಎಂದ ಸದುದ್ಧೇಶದಿಂದ ಮೂರು ದಿನಗಳ ಕಾಲ ನಡೆದ ಚಂಡಿ ಹೋಮ ನಿಜಕ್ಕೂ ಅದ್ಭುತವಾಗಿತ್ತು.ಸಂತಸದ ಸಂಗತಿ ಅಂದ್ರೆ ಈ ಆಶ್ರಮದಲ್ಲಿ ಎಲ್ಲ ಅಧಿಕಾರವು ಭಕ್ತರ ಕೈಯಲ್ಲಿಯೇ ಇದ್ದು ಗುರುಗು ಮಾತ್ರ ಆಧ್ಯಾತ್ಮದ ಅನಾವರಣವನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಕೇವಲ ಆಧ್ಯಾತ್ಮ ದಾಸೋಹವನ್ನಷ್ಟೇ ಅಲ್ಲದೇ ಈ ಶ್ರೀಮಠ ದೇಶಪ್ರೇಮ ಉಕ್ಕಿಸುವ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಂಡದ್ದಕ್ಕೆ ಭಕ್ತರು ವ್ಯಕ್ತಪಡಿಸುವ ಅಭಿಪ್ರಾಯಗಳು ಹೀಗಿವೆ.
ಒಟ್ನಲ್ಲಿ ಆಧ್ಯಾತ್ಮಿಕತೆಯ ಜೊತೆಗೆ ದೇಶಪ್ರೇಮವನ್ನು ಬೆಳೆಸುವ ಹಾಗೂ ಭಕ್ತರಿಂದ ಭಕ್ತರಿಗಾಗಿ ಭಕ್ತರಿಗೊಸ್ಕರವೇ ಇರುವ ಈ ಆಶ್ರಮ ನಿಜಕ್ಕೂ ಕಲಿಯುಗದಲ್ಲಿಯೂ ಶ್ರೀ ಸಿದ್ಧಾರೂಢರ ಐತಿಹ್ಯವನ್ನು ಎತ್ತಿ ತೋರಿಸುತ್ತಿದೆ ಎಂದರೆ ತಪ್ಪಾಗಲಾರದು.