ಕಿಂಗ್ ಕೊಹ್ಲಿಗೆ ಇಂದು ಬಹಳ ಮಹತ್ವದ ದಿನ.

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಡಿ.9 ಬಹಳ ವಿಶೇಷ ದಿನ. ಏಕೆಂದರೆ, ಇದೇ ದಿನದಂದು ಕೊಹ್ಲಿಗೆ ಅಂತಾರಾಷ್ಟ್ರೀಯ ತಂಡದ ನಾಯಕತ್ವ ನೀಡಲಾಯಿತು. 2014ರಲ್ಲಿ ಧೋನಿ ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದರು. ಆ ಬಳಿಕ ಅವರ ಸ್ಥಾನಕ್ಕೆ ಟೆಸ್ಟ್ನಲ್ಲಿ ಭಾರತವನ್ನು ನಂ.1 ಸ್ಥಾನಕ್ಕೇರಿಸಿದ ಕೊಹ್ಲಿಯನ್ನು ಆಯ್ಕೆ ಮಾಡಲಾಯಿತು. ಒಟ್ಟಾರೆ ಕೊಹ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದರು. ಈ 68 ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು.