​ಆಡಳಿತದ ವಿರುದ್ಧ ಅಪಪ್ರಚಾರ ಬೇಡ: ಮಾಧ್ಯಮಗಳಿಗೆ ತಾಲಿಬಾನ್ ಎಚ್ಚರಿಕೆ

​ಆಡಳಿತದ ವಿರುದ್ಧ ಅಪಪ್ರಚಾರ ಬೇಡ: ಮಾಧ್ಯಮಗಳಿಗೆ ತಾಲಿಬಾನ್ ಎಚ್ಚರಿಕೆ

ಕಾಬೂಲ್, ಜ.3: ಮುಂಬರುವ ದಿನಗಳಲ್ಲಿ ತಾಲಿಬಾನ್ ನ್ಯಾಯಾಲಯಗಳು ವಿದೇಶದಿಂದ ಕಾರ್ಯನಿರ್ವಹಿಸುವ ಮಾಧ್ಯಮಗಳನ್ನು ವಿಚಾರಣೆಗೆ ಒಳಪಡಿಸಲಿದೆ ಎಂದು ಅಫ್ಘಾನ್‌ನ ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯ ಹೇಳಿದೆ.

ಅಫ್ಘಾನ್ ಮಾಧ್ಯಮ ಸಂಸ್ಥೆಗಳು ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದ ಇಲಾಖೆಯ ಮುಖ್ಯಸ್ಥರು 'ಈ ಮಾಧ್ಯಮ ಸಂಸ್ಥೆಗಳ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರಲಾಗಿದೆ.

ಶೀಘ್ರದಲ್ಲೇ ನ್ಯಾಯಾಲಯದ ನಿರ್ಧಾರವನ್ನು ಘೋಷಿಸಲಾಗುವುದು' ಎಂದಿದ್ದಾರೆ. ಮಾಧ್ಯಮಸಂಸ್ಥೆಗಳು ಹೊರಗಿನಿಂದ ಕಾರ್ಯನಿರ್ವಹಿಸಲು ಮತ್ತು ಆಡಳಿತದ ವಿರುದ್ಧ ಅಪಪ್ರಚಾರಕ್ಕೆ ಅನುಮತಿ ನೀಡುವುದಿಲ್ಲ. ಅಪಪ್ರಚಾರ ಮಾಡುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ಸಂಸ್ಥೆಗಳು ಮತ್ತು ಸುದ್ಧಿವಾಹಿನಿಗಳು ತಾಲಿಬಾನ್ ಆಡಳಿತದಡಿಯಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಎದುರಿಸುತ್ತಲೇ ಇರುತ್ತವೆ. ಮಾಧ್ಯಮಗಳಿಗೆ ಸರಿಯಾದ ನಿರ್ದೇಶನವನ್ನು ರೂಪಿಸುವುದಾಗಿ ಕಳೆದ ಡಿಸೆಂಬರ್‌ನಲ್ಲಿ ತಾಲಿಬಾನ್ ಘೋಷಿಸಿತ್ತು.