ಕೇಂದ್ರ ಸಚಿವ ಜೋಶಿ ಪುತ್ರಿ ವಿವಾಹ: ಇಂದು ಸಂಜೆ ಆರತಕ್ಷತೆ

ಕೇಂದ್ರ ಸಚಿವ ಜೋಶಿ ಪುತ್ರಿ ವಿವಾಹ: ಇಂದು ಸಂಜೆ ಆರತಕ್ಷತೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪುತ್ರಿ ಅರ್ಪಿತಾ ಅವರ ವಿವಾಹ ಹೃಷಿಕೇಶ ಜೊತೆ ಅದ್ಧೂರಿಯಾಗಿ ನಗರದ ಡೆನಿಸನ್ಸ್ ಹೋಟೆಲ್'ನಲ್ಲಿ ಬುಧವಾರ ನೆರವೇರಿತು.

ಈ ಸಮಾರಂಭದಲ್ಲಿ ಕೇಂದ್ರ ಸಚಿವ ಅರ್ಜುನರಾಮ್ ಮೇಘವಾಲ, ರಾಜ್ಯಪಾಲ ತಾವರಚಂದ್ ಗೆಹ್ಲೊಟ್, ಸಚಿವರಾದ ಆರ್. ಅಶೋಕ, ಹಾಲಪ್ಪ ಆಚಾರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರಭಾಕರ ಕೋರೆ ಸೇರಿದಂತೆ ಸ್ಥಳೀಯ ಪಾಲ್ಗೊಂಡಿದ್ದರು.

ಇಂದು ಸಂಜೆ ಆರತಕ್ಷತೆ ನಡೆಯಲಿದ್ದು, ಕೇಂದ್ರ ಗೃಹ ಸಚಿವರಾದ ಅಮಿತ್ ಷಾ, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ, ರಾಜೀವ ಚಂದ್ರಶೇಖರ್, ಅರುಣಸಿಂಗ್, ಲೋಕಸಭಾ ಸಭಾಪತಿ ಓಂ ಬಿರ್ಲಾ, ಬಿಜೆಪಿ ರಾಷ್ಟ್ರಘಟಕದ ಅಧ್ಯಕ್ಷ ಜೆ.ಪಿ.‌ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳಲಿದ್ದಾರೆ.