ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಹಣ ಹಂಚಿಕೆ ಆರೋಪದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು ಗೊತ್ತಾ.?

ಬೆಂಗಳೂರು: ದೀಪಾವಳಿಯ ಉಡುಗೋರೆಯಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ಸ್ವೀಟ್ ಬಾಕ್ಸ್ ಜೊತೆಗೆ ಪತ್ರಕರ್ತರಿಗೆ ಹಣ ಕೂಡ ಹಂಚಿಕೆ ಮಾಡಿರೋ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಗೃಹ ಖಾತೆ ಸಚಿವ ಅರಗ ಜ್ಞಾನೇಂದ್ರ ಏನು ಹೇಳಿದ್ರು ಅಂತ ಮುಂದೆ ಓದಿ.ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಿಎಂ ಕಚೇರಿಯಿಂದ ಹಣ ಹಂಚಿಕೆ ಮಾಡಿರೋ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲವೆಂದರು.ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಪತ್ರಕರ್ತರಿಗೆ ಹಣ ಹಂಚಿಕೆ ಬಗ್ಗೆ ಯಾರು ಆರೋಪ ಮಾಡಿದ್ದಾರೋ ಅವರನ್ನೇ ಕೇಳಬೇಕು. ಲೋಕಾಯುಕ್ತಕ್ಕೆ ದೂರು ನೀಡಿದ್ರೇ ತನಿಖೆ ನಡೆಯಲಿದೆ. ಇದರಲ್ಲಿ ನಾವು ಮೂಗು ತೂರಿಸುವ ಕೆಲಸ ಮಾಡುವುದಿಲ್ಲ ಎಂಬುದಾಗಿ ಹೇಳಿದರು.ಅಂದಹಾಗೇ ದೀಪಾವಳಿಯ ಉಡುಗೋರೆಯಾಗಿ ಸಿಎಂ ಕಚೇರಿಯಿಂದ ಕೆಲ ಪತ್ರಕರ್ತರಿಗೆ ಲಕ್ಷ ಲಕ್ಷ ಹಣ ಕೂಡ ಸ್ವೀಟ್ ಬಾಕ್ಸ್ ಜೊತೆಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ವಿಚಾರ ಈಗ ಪತ್ರಕರ್ತರ ವಲಯದಲ್ಲೂ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.