ಉತ್ತರಕಾಶಿ ಹಿಮಪಾತ ದುರಂತ : ಇಬ್ಬರು ಕನ್ನಡಿಗರ ಮೃತದೇಹ ಇಂದು ಬೆಂಗಳೂರಿಗೆ ಆಗಮನ : ಸಚಿವ ಆರ್ ಅಶೋಕ್

ಉತ್ತರಾಖಂಡದ ಗಡಿ ಜಿಲ್ಲೆ ಉತ್ತರಕಾಶಿಯಲ್ಲಿ ಸಂಭವಿಸಿದ ಹಿಮಪಾತ ದುರಂತದಲ್ಲಿ ಮೃತಪಟ್ಟ ಇಬ್ಬರು ಕನ್ನಡಿಗರ ಮೃತದೇಹ ಇಂದು ಬೆಂಗಳೂರು ತಲುಪಲಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದು, ಉತ್ತರಕಾಶಿಯಲ್ಲಿ ಸಂಭವಿಸಿದ ಹಿಮಪಾತ ದುರಂತದಲ್ಲಿ ಮೃತಪಟ್ಟ ವಿಕ್ರಮ್. ರಕ್ಷಿತ್ ಮೃತದೇಹವನ್ನು ವಿಶೇಷ ವಿಮಾನದ ಮೂಲಕ ಇಂದು ಬೆಂಗಳೂರಿಗೆ ತರಲಾಗುತ್ತಿದೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರಾಖಂಡದ ಗಡಿ ಜಿಲ್ಲೆ ಉತ್ತರಕಾಶಿಯಲ್ಲಿ ಸಂಭವಿಸಿದ ಹಿಮಪಾತ ದುರಂತದಲ್ಲಿ ಬೆಂಗಳೂರು ಮೂಲದ ವಿಕ್ರಮ್. ರಶ್ಮಿತ್ ಎಂಬ ಯುವಕರ ಶವ ಪತ್ತೆಯಾಗಿದ್ದು, . ಅಕ್ಟೋಬರ್ 8 ರಂದು ನಡೆದ ಕಾರ್ಯಾಚರಣೆಯಲ್ಲಿ ಇಬ್ಬರ ಶವ ಹೊರಕ್ಕೆ ತೆಗೆಯಲಾಗಿದೆ.. ಕಳೆದ ಮಂಗಳವಾರ ಹಿಮಪಾತ ಸಂಭವಿಸಿದ ಬಳಿಕ ಯುವಕರು ನಾಪತ್ತೆಯಾಗಿದ್ದರು. ರಕ್ಷಣಾ ಕಾರ್ಯಚರಣೆ ವೇಳೆ ಮೃತ ದೇಹಗಳು ಪತ್ತೆಯಾಗಿವೆ.
ಉತ್ತರಕಾಶಿ ಹಿಮಪಾತದಲ್ಲಿ ಒಟ್ಟು 29 ಮಂದಿ ಮೃತಪಟ್ಟಿದ್ದು, ವಿಪತ್ತು ನಿರ್ವಹಣಾ ತಂಡಗಳು ಸ್ಥಳದಲ್ಲಿ ನಿರಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಉತ್ತರಕಾಶಿ ಜಿಲ್ಲೆಯ ದ್ರೌಪದಿಯ ದಂಡ-2 ಪ್ರದೇಶಕ್ಕೆ ಅಕ್ಟೋಬರ್ 4ರಂದು ನೆಹರೂ ಪರ್ವತಾರೋಹಣ ಸಂಸ್ಥೆಯ 40 ಜನ ಪರ್ವತಾರೋಹಿಗಳ ತಂಡ ತೆರಳಿತ್ತು. ಈ ವೇಳೆ, ಹಿಮಕುಸಿತ ಉಂಟಾಗಿ ಪರ್ವತಾರೋಹಿಗಳು ಸಿಲುಕಿದ್ದರು. ಮೊದಲ ದಿನವೇ 10 ಜನರ ಮೃತಪಟ್ಟಿದ್ದರು. ಆದರೆ, ಪ್ರತಿಕೂಲ ಹವಾಮಾನ ಕಾರಣ ರಕ್ಷಣಾ ಕಾರ್ಯಕ್ಕೆ ತೊಂದರೆ ಉಂಟಾಗಿತ್ತು.