ವಸತಿ ರಹಿತರಿಗೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್ : ಶೀಘ್ರವೇ ಮನೆ ನಿರ್ಮಾಣಕ್ಕೆ ಹಣ ಮಂಜೂರು
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 18 ಲಕ್ಷ ಮನೆ ನೊಂದಣಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ. ಬರುವ ವರ್ಷ ಎಲ್ಲಾ ಮನೆಗಳಿಗೆ ಹಣ ಬರಲಿದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ಬಂದ ಮೇಲೆ 5 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಯೋಜನೆ ಇದೆ. ಈಗಾಗಲೇ 20 ಸಾವಿರ ಮನೆಗಳ ನಿರ್ಮಾಣ ಪೂರ್ಣವಾಗಿದೆ. ಶೀಘ್ರವೇ ನೂತನ ಮನೆಗಳನ್ನು ಉದ್ಘಾಟನೆ ಮಾಡಲಾಗುತ್ತದೆ. ಅತಿಹೆಚ್ಚಿನ ಅನುದಾನ ಯಶವಂತಪುರ ಕ್ಷೇತ್ರಕ್ಕೆ ಪಡೆದಿದ್ದಾರೆ ಎಂದರು.
ಬೆಂಗಳೂರು ಮಹಾನಗರ ಅತಿವೇಗವಾಗಿ ಬೆಳೆಯುತ್ತಿದೆ. ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಜನರಿಗಿಂತ ಹೆಚ್ಚಾಗಿ ವಾಹನಗಳೇ ಇದ್ದಾವೆ. ಇದಕ್ಕಾಗಿ ಸರ್ಕಾರ ವಿಶೇಷ ಯೋಜನೆ ಮಾಡಲಿದೆ. ಇನ್ನೂ ಮೂರು ತಿಂಗಳಿನಲ್ಲಿ ಅದನ್ನು ನಿಮ್ಮ ಚರ್ಚೆಗೆ ತರುತ್ತೇನೆ ಎಂದರು.
ನಾಲ್ಕು ಅಂತಸ್ತಿನ ಮನೆಯಿದ್ರೇ ವಿದ್ಯುತ್ ಸಂಪರ್ಕ ಕೊಡುತ್ತಿರಲಿಲ್ಲ. ಅಲ್ಲದೇ ನಾಲ್ಕು ಅಂತಸ್ತಿನ ಮನೆ ಇದ್ದರೇ ಡಬಲ್ ಬಿಲ್ ಕಟ್ಟಬೇಕಿತ್ತು. ನಮ್ಮ ಸರ್ಕಾರ ಬಂದ ಮೇಲೆ ಅದನ್ನು ತೆಗೆದು ಹಾಕಿದೆ ಎಂದರು.