ವೈರಾಗ್ಯ ಸಿಂಹಾಸನ ಮಹಾಸಂಸ್ಥಾನ ಪೀಠಕ್ಕೆ ಪಂಚಮುಖಿ ಪರಮೇಶ್ವರ ಆಗಮನ

ಕೇದಾರನಾಥನ ಉತ್ಸವ ಮೂರ್ತಿ ಪಂಚಮುಖಿ ಪರಮೇಶ್ವರ ಇಂದು ಊಖೀಮಠದಲ್ಲಿರುವ ವೈರಾಗ್ಯ ಸಿಂಹಾಸನ ಮಹಾಸಂಸ್ಥಾನ ಪೀಠಕ್ಕೆ ಆಗಮಿಸಿತು. ಇಂದಿನಿ0ದ ಆರು ತಿಂಗಳು ಊಖೀಮಠದಲ್ಲಿ ಪೂಜೆಗೊಳ್ಳಲಿದೆ. ಷಣ್ಮಾಸಪೂರ್ಣ ಕೇದಾರನಾಥನ ದೈವದಲ್ಲಿ ಪೂಜೆಗೊಂಡ ಚಿನ್ನದ ಕಿರೀಟ ಪರಂಪರೆಯ0ತೆ ಸ್ವೀಕರಿಸಬೇಕಿದ್ದ ಶ್ರೀ ಹಿಮವತ್ಕೇದಾರ ಭೀಮಾಶಂಕರ ಲಿಂಗ ಜಗದ್ಗುರುಗಳ ಅನುಪಸ್ಥಿತಿಯಲ್ಲಿ ಅವರ ಆದೇಶದಂತೆ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀಗಳು ಪರಂಪರೆಯ ನಿಯಮಗಳನ್ನು ನಡೆಸಿಕೊಟ್ಟರು. ಈ ವಿಶೇಷ ಸಂದರ್ಭದಲ್ಲಿ ಕೇದಾರನಾಥ ಪ್ರಧಾನ ಅರ್ಚಕರಾದ ವಾಗೀಶಲಿಂಗ, ಶಂಕರಲಿ0ಗ, ಗಂಗಾಧರಲಿ0ಗ, ವಿಶ್ರಾಂತ ಅರ್ಚಕರಾದ ಗುರುಲಿಂಗಜಿ, ಮಂದಿರ ಸಮಿತಿ ಮುಖ್ಯಸ್ಥರು, ಅಧಿಕಾರಿ ವರ್ಗ, ಕರ್ಮಾರಿಗಳು, ಕೇದಾರ ಜಗದ್ಗುರುಗಳ ಶಿಷ್ಯರಾದ ಈಶ್ವರಲಿಂಗ, ಎನ್.ಆರ್. ಸಂತೋಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.