ಪ್ರಾಪರ್ಟಿ ರಿಟರ್ನ್ ಪರೇಡ್. | Police | Kalaburagi |

ಕಲಬುರಗಿ ಜಿಲ್ಲೆಯಾದ್ಯಂತ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನವಾಗಿರುವ ದೂರುದಾರರ ಪ್ರಾಪರ್ಟಿಯನ್ನ ಪತ್ತೆಹಚ್ಚಿ ದೂರುದಾರರು ಕಳೆದುಕೊಂಡಿರುವ ಪ್ರಾಪರ್ಟಿಯನ್ನು ಮರಳಿ ನೀಡಲು ಕಲಬುರಗಿ ಜಿಲ್ಲಾ ಪೊಲೀಸ್ ಭವನದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಲಾಗಿತ್ತು. ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಯವರ ಸಮ್ಮುಖದಲ್ಲಿ ವಿವಿಧ ಸ್ವತ್ತಿನ ಪ್ರಕರಣಗಳು ಪತ್ತೆಮಾಡಲಾದ ಬಂಗಾರ, ಬೆಳ್ಳಿ, ಹಣ ಸೇರಿದಂತೆ ವಾಹನಗಳು ವಾರಸುದಾರರಿಗೆ ಹಿಂದಿರುಗಿಸಲಾಯಿತು. ಕಲಬುರಗಿ ಜಿಲ್ಲೆಯ ಎಸ್.ಪಿ. ಇಶಾ ಪಂತ್ ಮಾತನಾಡಿ 2020 ಮತ್ತು ಪ್ರಸ್ತುತ ಸಾಲಿನ ಇಲ್ಲಯವರೆಗೆ ಜಿಲ್ಲೆಯಲ್ಲಿ ಪತ್ತೆ ಮಾಡಲಾದ ಪ್ರಾಪರ್ಟಿ ಒಟ್ಟು ಮೌಲ್ಯ 1,18.28,958 2020 ಮತ್ತು 2021 ನೇ ಸಾಲಿನ ಇಲ್ಲಿಯವರೆಗೆ 2019 ನೇ ಸಾಲನಿಂದ ಪ್ರಸ್ತುತ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಪತ್ತೆ ಮಾಡಲಾದ ಒಟ್ಟು 132 ಪ್ರಕರಣಗಳನ ಪ್ರಾಪರ್ಟಿಯನ್ನು ಇಂದು ಫಿರ್ಯಾದಿ, ವಾರಸುದಾರರಿಗೆ ನ್ಯಾಯಾಲಯದ ಅನುಮತಿ ಪಡೆದು ಹಿಂದಿರುಗಿಸುತಿದ್ದೇವೆ ಎಂದು ಹೇಳಿದ್ರು. ಇನ್ನೂ ಹಣ ಕಳೆದುಕೊಂಡು ಮರಳಿ ಪಡೆದ ಫಿರ್ಯಾದಿದಾರ ಅನಿಲಕುಮಾರ ಪಾಟೀಲ ತೆಲ್ಕೂರ್ ಮಾತನಾಡಿ ಹಣ ನಮಗೆ ಮರಳಿ ಸಿಕ್ಜಿರುವುದ ಕಾರಣ ತುಂಬಾ ಸಂತೋಷವಾಗುತ್ತಿದೆ ಎಂದರು.