ಜಾರಕಿಹೊಳಿ ಬ್ರದರ್ಸ್ ಗೆ ಟಾಂಗ್ ಕೊಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳಕರ |Belagavi|
ದೇವರ, ಮತದಾರರ ಆಶೀರ್ವಾದಿಂದ ಗೆಲುವು ಸಾಧಿಸಿದ್ದೇವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ನಡೆಸಿ ಜಯ ಸಾಧಿಸಿದ್ದೇವೆ. ಅವರು ಕಾಂಗ್ರೆಸ್ಸನ್ನು ಸೋಲಿಸ್ತಿವಿ ಸೋಲಿಸ್ತೀವಿ ಅಂದ್ರು, ನಾವು ಗೆಲ್ತೀವಿ, ಗೆಲ್ತೀವಿ ಎಂದು ಗೆದ್ದಿದ್ದೇವೆ ಎಂದು ಹೇಳುವ ಮೂಲಕ ಜಾರಕಿಹೊಳಿ ಬ್ರದರ್ಸ್ ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಟಾಂಗ್ ನೀಡಿದ್ದಾರೆ. ಚಿಕ್ಕೋಡಿ ಆರ್ಡಿ ಕಾಲೇಜಿನ ಮತಗಟ್ಟೆ ಎಣಿಕೆ ಕೇಂದ್ರದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಒಟ್ಟಗ್ಗಿನ ಚುನಾವಣೆ ಎದುರಿಸಿದ್ದೇವೆ. ಎಂಎಲ್ಸಿ ಚುನಾವಣೆ ಫಲಿತಾಂಶ ಮುಂದಿನ 2023ರ ಚುನಾವಣೆಗೆ ದಿಕ್ಸೂಚಿ ಆಗಿದೆ. 2023ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸ್ತಿವಿ. ಪಕ್ಷೇತರ ಅಭ್ಯರ್ಥಿ ಗೆಲುವಿನ ಬಗ್ಗೆ ಅವರ ಹೈಕಮಾಂಡ್ ಯೋಚನೆ ಮಾಡಲಿದೆ ನಾನಲ್ಲ ಎಂದು ಹೇಳಿದರು.