ಗದಗ ಜಿಲ್ಲೆಯಲ್ಲಿ ೭೫ ನೇ ಸ್ವಾತಂತ್ರ‍್ಯೋತ್ಸವ ನಿಮಿತ್ತ ಧ್ವಜಾರೋಹಣ | Gadag |

ಗದಗ ಜಿಲ್ಲೆಯಲ್ಲಿ ೭೫ ನೇ ಸ್ವಾತಂತ್ರ‍್ಯೋತ್ಸವ ನಿಮಿತ್ತ ಕೆ. ಎಚ್.ಪಾಟೀಲ ಮೈದಾನದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಶಾಸಕ ಎಚ್.ಕೆ.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಪಾಲ್ಗೊಂಡಿದ್ದರು. ಧ್ವಜಾರೋಹಣ ನಂತರ ಪೊಲೀಸ್, ಸ್ಕೌಟ್ಸ್ & ಗೈಡ್ಸ್, ಅಬಕಾರಿ, ಹಾಗೂ ಎನ್ ಸಿ.ಸಿ. ಕೆಡೆಟ್ಗಳಿಂದ ಪಥಸಂಚಲನ ನೆರವೇರಿತು. ಸಚಿವ ಸಿ.ಸಿ.ಪಾಟೀಲ ಗೌರವ ವಂದನೆ ಸ್ವೀಕರಿಸಿದರು. ಜಿಲ್ಲಾಧಿಕಾರಿ ಎಮ್ ಸುಂದರೇಶ್ ಬಾಬು, ಸಿಇಒ ಭರತ್, ಎಸ್ ಪಿ ಯತೀಶ್ ಎನ್. ಪಾಲ್ಗೊಂಡಿದ್ದರು.